ಓ ಕಾಲವೇ! ಓ ಕಾಲವೇ!

ಓ ಕಾಲವೇ! ಓ ಕಾಲವೇ!
ಸಮಯವು ಸಿಂಹದ ಪಂಜುಗಳನ್ನೂ
ನಿಶಕ್ತಿಯಾಗಿಸುವುದು
ಹುಟ್ಟಿದೆಲ್ಲವುಗಳನ್ನೂ ಮಣ್ಣಿನ
ಗೋರಿಯೊಳಗೆ ಅಡಗಿಸಿಕೊಳ್ಳವುದು
ಅಹಂಕರದಿಂದ ಘಜೆ9ಸಿದವರೂ
ಕೊನೆಯಲ್ಲಿ ಮಣ್ಣಾಗುವರು
ಮಣ್ಣಿಂದ ಮೇಲೆದ್ದು ನಲಿದವರೂ
ಕೊನೆಯಲ್ಲಿ ಮಣ್ಣಾಗುವರು
ಸಂತೋಷವೋ? ದéುಖವೋ?
ಕಾಲವೇ ನಿಧ9ರಿಸುವುದು
ಏನು ಸಂತೋಷವೋ ಅದನ್ನೇ ಮಾಡು
ಸಮಯ ಕಾದಿಹುದು
ಎಲ್ಲವನ್ನೂ ನುಂಗುವುದು
ಸೌಂದರ್ಯವೋ? ಭಯಾನಕವೋ?
ಈ ಮಣ್ಣಲ್ಲೇ ಹುದುಗಿಹುದು
ಯೌವನ, ಸುಕ್ಕುಗಟ್ಟದ ಚಮ9
ಕಾಲವೇ ನಿನ್ನ ನಡೆಯು
ಅನುಭವಿಸು ಕಷ್ಟವೋ? ಸುಖವೋ?
ಕಾಲನಿಗೆ ನಮಿಸು
ಹೆಜ್ಜೆಯ ಮುಂದಿಡು
ಹೆದರದೆ ಮುನ್ನಡೆ/

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...