ಇನ್ನೂ ಮುಗಿದಿಲ್ಲ ನನ್ನ ಪಯಣ
ಹಿಂತಿರುಗುವ ಮಾತೆಲ್ಲಿ?
ಗುರಿಯ ಹಾದಿಯಲ್ಲಿ ನಾನು
ಹಿಂತಿರುಗಲೆಂತು ಮುರಿದು ಮಾತು;
ಗುರಿಯೊಂದು ಕಡೆ ಕರೆಯುತಿಹುದು
ಸಂಕಟವೊಂದು ಕಡೆ ಸೆಳೆಯುತಿಹುದು
ಮಾತುಗಳಿಂದ ಮನವ ಮುರಿದವರಾರು?
ಈಗ ಪ್ರೀತಿ ಆಕಾಶದಿಂದ ಉದುರಿತೋ!
ಹಗಲು-ರಾತ್ರಿ ಎನ್ನದೆ ನಡೆದಿಹೆನು
ಈಗೇಕೆ ಮುರಿಯಲಿ ನನ್ನ ಪಯಣ?
ಇನ್ನು ಕೆಲವೇ ದೂರ ನನ್ನ ಗುರಿ
ಗುರಿ ಸೇರಿ ಆನಂದಿಸಲೋ ಇಲ್ಲ
ನಿಮ್ಮ ಮಾತಿಗೆ ಬೆಲೆಗೊಟ್ಟು
ಮತ್ತೆ ನಿಮ್ಮ ಮಾತಿಗೆ ಬಲಿಯಾಗಲೇ?
ಈ ಧ್ವಂಧ್ವವೇ ಪರೀಕ್ಷೆ
ಧ್ವಂಧ್ವವ ಮೀರುವುದೇ ಗೆಲುವು
ಕುರುಡಾಗಬೇಕು!
ಕಿವುಡಾಗಬೇಕು!
ನಡೆಯಬೇಕು ಗುರಿಯ ಕಡೆಗೆ
ಆನಂದಿಸಬೇಕು ಒಲವಿಗೆ//
No comments:
Post a Comment