ಏಳು, ಎದ್ದೇಳು!
ಆಗಸವ ನೋಡು,
ಕೊನೆಯಿಲ್ಲದ ಅನಂತನೆಡೆಗೆ ನೋಡು,
ಚೈತನ್ಯದ ಸೊಬಗ ತರುತ್ತಿರುವ ಆಕಾಶದೆಡೆಗೆ ನೋಡು,
ಜಗದ ನೋವುಗಳ ದಾಟಿ ನಡೆ,
ಮೌನ ಸಾಗರವನೇ ಹೊತ್ತು,
ನಿಲ್ಲದೇ ನಡೆಯುವುದ ಕಲಿ,
ಗುರಿ ಮುಟ್ಟುವವರೆಗೂ ಇರಲಿ ಛಲ,
ನಡೆದಷ್ಟೂ ಸಂತೋಷದ ಭಾವಗಳು ಉಕ್ಕಲಿ,
ನಡೆಯಬೇಕು ಮೈಲುಗಳ ಧಣಿವರಿಯದೆ,
ಜೊತೆಗೆ ತುಟಿಯ ಮೇಲೆ ನಗುವಿರಲು,
ಎಲ್ಲ ಗೆಲುವುಗಳು, ಎಲ್ಲ ಕದನಗಳು ನನ್ನದೇ!||
No comments:
Post a Comment