Friday, August 1, 2025

ಪರಿಸರ

ಕೆರೆಗಳೆಲ್ಲಿ?, ಗುಡ್ಡಗಳೆಲ್ಲಿ?

ಇಲ್ಲಿ ಎಲ್ಲವೂ ಬೆತ್ತಲಾಗಿವೆ|

ಯಾರದೋ ಹೊಟ್ಟೆಯ ಹಸಿವಿಗೆ

ನಿತ್ಯ ಬಲಿಪಶುಗಳಾಗಿವೆ||

 

ಮರಗಿಡಗಳೆಲ್ಲಿ?, ಪ್ರಾಣಿ-ಪಕ್ಷಿಗಳೆಲ್ಲಿ

ಕಾಣ ದೂರಿಗೆ ವಲಸೆ ಹೋಗಿವೆ|

ನಮ್ಮಯ ಸ್ವಾರ್ಥ ಸಾಧನೆಗೆ

ತಮ್ಮಯ ಬಲಿಗೊಟ್ಟಿವೆ||

 

ಮಳೆಯಿಲ್ಲ, ಬೆಳೆಯಿಲ್ಲ,

ಆರ್ತನಾದ ಮುಗಿಲು ಮುಟ್ಟಿದೆ|

ಅಜ್ಞಾನವು ಮೇಳೈಸಿರೆ

ಸರ್ವನಾಶವು ಮುಂದೆ ಕಾದಿದೆ||

 

ನೀರಿಲ್ಲ, ನೆರಳಿಲ್ಲ,

ಬಿಸಿಲ ಬೇಗೆ ಎಲ್ಲೆ ಮೀರಿದೆ|

ಪರಿಸರ ಸಂರಕ್ಷಿಸದೇ

ಮುಂದಿನ ಪೀಳಿಗೆಗೆ ಭವಿಷ್ಯವೆಲ್ಲಿದೆ?।।



No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...