Saturday, August 2, 2025

ಮೌನ ರಾಗ

 ಯಾವ ಕರೆಗೋ!,

ಯಾವ ಕಡೆಗೋ!

ಹೊರಳುವುದು ಮನ,

ಕೇಳಿ ಕಾಣದರಿಯದ ಗಾನಕೆ ।।

 

ಕರಗುವುದು ಮನ,

ಕೆರಳುವುದು ಮನ|

ನಿದ್ದೆಯಲ್ಲೂ ಕಾಡುವುದು,

ಕಂಡು ಕೇಳರಿಯದ ರಾಗಕೆ||

 

ಮನವ ಶೋಧಿಸುವುದು,

ದಿಕ್ಕುಗಾಣದೆ ಓಡಿಹುದು|

ಯುದ್ಧದ ಸೆರೆಯಾಳಾಗಲೇ?,

ಇಲ್ಲ, ಇನಿದನಿಗೆ ಶರಣಾಗಲೇ?।।

 

ಯಾವ ಕರೆ?, ಯಾವ ಕಡೆ?,

ಯಾವ ಗಾನ?, ಯಾವ ರಾಗ?

ಮನ ಸೋತಿಹೆ ಅನಂತ ನಾದಕೆ,

ತಲೆದೂಗುತಿಹೆ ಮೌನ ರಾಗಕೆ||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...