ಈ ನೋವು ಏಕೋ?
ಮತ್ತೆ ಮತ್ತೆ ನುಸುಳುತ್ತಿದೆ;
ಬೇರೆ ದಾರಿ ಕಾಣದೆ,
ನನ್ನನೇ ಹುಡುಕಿ ಬರುತ್ತಿದೆ
ಮಾಧವ ||
ಮನಸ್ಸು ನೋವು!
ನೋವು ಮನಸ್ಸು!
ಮನದೊಳಗೆ ಸೇರಿ ಬೆರೆತಿದೆ,
ಕೊಳಲ ನುಡಿಸು ಮಾಧವ||
ಕೊಳಲ ದನಿ ಕೇಳುತಿರಲು
ಮನದ ನೋವು ಕರಗುವುದು|
ಒಲವ ಬಳಸಿ ಸೇರುತಿರಲು
ಮನವು ತಕಥೈ ಮಾಧವ||
ನಾದವು ಹೊಮ್ಮುತಿರಲು
ಜೀವ ಬಿಡದು ಸುಖವನು|
ನಾದದಲ್ಲಿ ತೇಲುತಿರಲು
ನೋವು ಸುಖವೇ ಮಾಧವ
||
ಗಾಳಿಯಲ್ಲಿ ತೇಲಿ ಬರುವುದು
ನಿನ್ನ ಕೊಳಲ ಗಾನ|
ವಿರಹದಿ ಕಾಯುತಿಹೆನು
ನಿನ್ನ ಒಲವ ಕಾಣಲು
ಮಾಧವ ||
No comments:
Post a Comment