ಬೆಳಕನು ನುಂಗುತ್ತಾ,
ಕತ್ತಲೆಯು
ಎಲ್ಲೆ ಮೀರಿತ್ತು!,
ಕಾಡು ನಾಡೆನ್ನದೆ,
ಎಲ್ಲವ
ಬಳಸಿ ಆವರಿಸಿತ್ತು,
ಮೌನವು ಎಲ್ಲೆಡೆ
ಸಂತಸದಿ ತಾ ಮಾತನಾಡಿತ್ತು,
ಕತ್ತಲೊಳು
ಎಲ್ಲವೂ ಲಯವಾದುವು,
ಇಹ
ಪರಗಳು ಎರಡೂ ಒಂದಾದುವು,
ಮನದೊಳು
ಎದ್ದ ಭಾವದಲೆಗಳು,
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment