Sunday, August 3, 2025

ಕನಸಿನ ದಾರಿ

 ಮತ್ತೆ ಇಲ್ಲ, ಮತ್ತೆಂದೂ ಇಲ್ಲ,

ಮತ್ತೆಂದೂ ಹೃದಯವ ನೋಯಿಸಲಾರೆ;

ನಾನಂದು ಕೊಂಡ ಜೀವನ ನನ್ನದಾಗದೇ?

ಹಿಂಸಿಸುವ ಮಾತುಗಳ ಕೇಳಿ ರೋಸಿಹೋಗಿದ್ದೇನೆ.

ಮತ್ತೆ ಇಲ್ಲ, ಮತ್ತೆಂದೂ ಇಲ್ಲ, ಕೇಳಿಸಿಕೊಳ್ಳಲಾರೆ.

ಹೃದಯದ ಅಂತರಾತ್ಮದ ಕರೆಯ ಕೇಳಿಸಿಕೊಳ್ಳುತ್ತಿದ್ದೇನೆ.

ಎಚ್ಚೆತ್ತಿದ್ದೇನೆ, ನನ್ನ ದೈವತ್ವದ ದಾರಿಯ ಗೋಚರವಾಗಿದೆ.

ನನ್ನ ಹಳೆಯ ಸರುಕುಗಳ ಗಂಟು ಕಟ್ಟಿದ್ದೇನೆ,

ನನ್ನದೆಂದುಕೊಂಡ ಎಲ್ಲವನ್ನೂ ಹೊತ್ತಿದ್ದೇನೆ.

ಎಲ್ಲರೂ ಮಲಗಿದ್ದಾರೆ, ನಡುರಾತ್ರಿಯ ಕತ್ತಲು,

ನಾ ನಡೆವ ದಾರಿಯಲ್ಲಿ ಮಾತ್ರ ಬೆಳಕು,

ನಡೆದದ್ದು ಬಹಳ ಮೈಲಿಗಳು, ಬೇಸರವಿಲ್ಲದೆ!

ಹೊಸ ಬೆಳಕು ಕಾಣುತ್ತಿದ್ದೇನೆ - ನನ್ನ ದಾರಿಯಲ್ಲಿ.

ನಾ ಕಂಡ ಕನಸಿನ ದಾರಿಯಲ್ಲಿ.

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...