Friday, August 1, 2025

ಯುದ್ಧ

 ಯುದ್ಧ ಕೊನೆಗೊಳ್ಳುವುದು,

ನಾಯಕರು ಕೈ ಕುಲುಕುವರು;

ವಯಸ್ಸಾದ ತಾಯಿ ಕಾಯುತ್ತಿರುತ್ತಾಳೆ,

ಹುತಾತ್ಮನಾದ ಮಗ ಬರುವನೆಂದು;

ಯುವತಿಯೂ ಕಾಯುತ್ತಿರುತ್ತಾಳೆ,

ಪ್ರೀತಿಯ ಗಂಡ ಮರಳಿ ಬರುವನೆಂದು;

ಒಹ್! ಮಕ್ಕಳೂ ಕಾಯುತ್ತಿರುತ್ತಾರೆ,

ತಮ್ಮ ಜೀವನದ ನಾಯಕ ಬರುವನೆಂದು;

ನಮ್ಮ ತಾಯ್ನಾಡನ್ನು ಯಾರು

ಒತ್ತೆಯಿಟ್ಟರೋ ಗೊತ್ತಿಲ್ಲ;

ಆದರೆ,

ಯಾರು ಬೆಲೆ ಕಟ್ಟಿದರೆಂದು ನಾಬಲ್ಲೆ; ||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...