ನಡೆಯುತ್ತಿದ್ದೇನೆ ನನ್ನದಲ್ಲದ ದಾರಿಯಲ್ಲಿ,
ಅನಿವಾರ್ಯತೆಗೆ ಕಟ್ಟಿದೆ ಕೈ, ಕಾಲು,
ಕಾಣದ ಬಿಗಿಯಾದ ದಾರದಲ್ಲಿ.
ಎಷ್ಟು ದೂರ ಕ್ರಮಿಸಿದ್ದೇನೋ? ಪ್ರಶ್ನಾರ್ಥಕ?
ಇನ್ನೆಷ್ಟು ದೂರ ಕ್ರಮಿಸಬೇಕೋ? ತಿಳಿದಿಲ್ಲ, ಅನಂತ!
ಗುರಿ ಯಾವುದು?, ಕೊನೆ ಯಾವುದು?
ಗುರಿಯಿಲ್ಲದ ಹಾದಿಯಲ್ಲೇ ಕಳೆದುಹೋಗಿದ್ದೇನೆ.
ಬೇಸರವಿಲ್ಲ ಆದರೆ, ಅನಾಥ ಪ್ರಜ್ಞೆಯಷ್ಟೇ
ಮನಸ್ಸೂ ಅಷ್ಟೇ , ಜಡಗಟ್ಟಿದೆ.
ಬೇಸರವಿಲ್ಲದೆ ಮುನ್ನಡೆಯಬೇಕಷ್ಟೇ .
ಅದೇ ಶಿಸ್ತು, ಕಾಣುವುದೆಲ್ಲವ ಕಾಣಬೇಕು,
ಯಾವುದರಲ್ಲಡಗಿದೆಯೋ ನನ್ನ ಗುರಿ,
ನೂರು ದಾರಿಯ ಕ್ರಮಿಸುವ ವಿಶ್ವಾಸವಿದೆ.
ಶಕ್ತಿ ಅವನೇ ನೀಡಬೇಕಷ್ಟೇ,
ಗುರಿಯಿಲ್ಲದ ಅನಂತ ದಾರಿಯ ನಡೆವ ತವಕ||
No comments:
Post a Comment