Saturday, May 30, 2026

ಮೌನ - ಮಾತು

ಪ್ರೀತಿಯ ಭಾವವ ವ್ಯಕ್ತಪಡಿಸು,

ಮೌನ ಪ್ರೀತಿಯ ಭಾಷೆಯಲ್ಲ,

ಸಮಯಕ್ಕೆ ಮಾತುಗಳ ಜೋಡಿಸು,

ಸಾಂತ್ವನದ ಮಾತುಗಳು ಹೃದಯ ತಟ್ಟುವುವು.


ಹೃದಯ ತೆರೆದು ಮಾತನಾಡು,

ಮಾತುಗಳು ಮಧುರ ಪುಷ್ಪಗಳ ಅರ್ಪಿಸು,

ಮೌನ ಬೇಡ, ಮೌನರಾಗ ಬೇಡ,

ಪದಗಳು ಸಂಗೀತವಾಗಿ ರಾಗ ಮಾಲಿಕೆಯಾಗಲಿ.


ಹೇಳಿಬಿಡು, ಮಧುರ ಮಾತುಗಳಲ್ಲಿ,

ಒಪ್ಪುವುದೋ!, ಇಲ್ಲವೋ!, ಗೊಂದಲಬೇಡ,

ಹೃದಯ ನಿನ್ನದಾದರೆ ಜೊತೆಗೂಡುವುದು,

ಇಲ್ಲವಾದರೆ ಅದೊಂದು ಮರೀಚಿಕೆಯಷ್ಟೇ!.


ನಿನ್ನದೆಂದು ಬರೆದಿರುವುದು ಕಾದಿದೆ ನಿನಗಾಗಿ,

ನಿನ್ನದಲ್ಲದ ಹೃದಯ ನಿನಗೇಕೆ ಹೇಳು!,

ಪ್ರಶ್ನಿಸು, ಹೇಳು, ಕೇಳು, ಬಿಡುಗಡೆಗಾಗಿ,

ಮೌನವಾಗು, ಜೊತೆಗೂಡು ನಿನ್ನದಾದಂತೆ. 

No comments:

Post a Comment

ಮೌನ - ಮಾತು

ಪ್ರೀತಿಯ ಭಾವವ ವ್ಯಕ್ತಪಡಿಸು, ಮೌನ ಪ್ರೀತಿಯ ಭಾಷೆಯಲ್ಲ, ಸಮಯಕ್ಕೆ ಮಾತುಗಳ ಜೋಡಿಸು, ಸಾಂತ್ವನದ ಮಾತುಗಳು ಹೃದಯ ತಟ್ಟುವುವು. ಹೃದಯ ತೆರೆದು ಮಾತನಾಡು, ಮಾತುಗಳು ಮಧುರ ಪು...