ಮನದ ಮೂಲೆಯಲ್ಲಿ,
ಬೇಡದ
ಗಂಟು ಮೂಟೆಯಿದೆ.
ಹತ್ತು
ಹಲವಾರು ವರುಷಗಳಲ್ಲಿ,
ಕೂಡಿಟ್ಟ
ನೋವಿನ ಕಂತೆಯಾಗಿದೆ.
ಯಾರಿಗೂ
ತಿಳಿಯದ,
ವಿಷಯಗಳು
ಅಲ್ಲಿ ಕೊಳೆಯುತ್ತಿದೆ.
ನನಗೆ
ಮತ್ತೆ ನೆನಪಾದ
ಸಂಗತಿಗಳು
ಸಾವಿಲ್ಲದೆ ಮಲಗಿದೆ.
ಹೊರಗೆ ಮಾಸಿದಂತೆ ಕಾಣುವುದು,
ಒಳಗೆ ಜೀವತೆಗೆಯುವಷ್ಟು ಮಾರಣಾಂತಿಕ.ಎಲ್ಲವೂ
ತಿಳಿದಿದೆ ಸಮಯ ಕಾಯುವುದು,
ಒಳಗೆ
ಜ್ವಾಲಾಮುಖಿಯ ಸಾಂಕೇತಿಕ.
ಮಾಸಿದ ಕಾಗದದಲ್ಲಿ,
ಅಕ್ಷರಗಳು ಕಾಣದೇ ಕ್ಷೀಣಿಸಿವೆ.
ಮನದ ಪಟಿಲದಲ್ಲಿ,
ಗಾಯಗಳು ಮಾಸದೇ ಉಳಿದಿವೆ.
ಮೌನದ
ಮಡಿಲಲ್ಲಿ ಬೆಳಕು ಕಾದಿದೆ,
ಗಂಟುಗಳ
ಹಿಂದೆ ಹೊಸ ದಾರಿ ನಿಂತಿದೆ.
ಮನದ
ಗಾಯಗಳಲಿ ಆಶೆಯ ಕಿರಣ,
ಜೀವನದ
ಪಟದಲ್ಲಿ ಪುನರುಜ್ಜೀವನ.
03.05.2026

No comments:
Post a Comment