Sunday, September 27, 2026

ಮಧುರವೋ? ನೋವೋ?

ಇದೆ ಜಾಗವಲ್ಲವೇ?

ನಾನು ಇಲ್ಲಿಯೇ ಬಿದ್ದದ್ದು,

ಜ್ಞಾನ ತಪ್ಪಿದ್ದು,

ಮತ್ತೆ ಜೀವನದಲ್ಲಿ ಏಳಲಾರದೆ ಪರಿತಪಿಸಿದ್ದು,

ಇದೆ ಉದ್ಯಾನವಲ್ಲವೇ?

ನಾ ಇಷ್ಟ ಪಟ್ಟಿದ್ದು?

ಇಂದೇಕೆ ಮನವು ತೊಳಲುತ್ತಿದೆ,

ಸಂತಸ ಮಾಯವಾಗಿದೆ,

 ಕಾರ್ಮೋಡ ಬೆನ್ನು ಹತ್ತಿದೆ,

ಓ! ಇದೇ ಹೂವಿಗೆ ಮನ ಸೋತಿದ್ದು,

ಅದರ ಬಣ್ಣ, ಪರಿಮಳ ಮನ ಸೆಳೆದಿತ್ತು,

ಅದರ ಹೆಸರ ಹುಡುಕುತ್ತಾ ಅಲೆಮಾರಿಯಾದೆ,

ಹುಡುಕುತ್ತಾ. ಹುಡುಕುತ್ತಾ ಎಡವಿ ಬಿದ್ದೆ,

ಎಲ್ಲವು ನೆನಪಾಗಿದೆ, ಮಧುರವೋ? ನೋವೋ?

ಮನದ ಪಯಣ

ಓ! ಈ ದಾರಿ ಮನದಲ್ಲಿ ನೆಲೆ ನಿಂತಿದೆ,

ಮುನ್ನಡೆಯುತಿರೆ ಸಂತಸ ಉಕ್ಕುವುದು,

ಅವ್ಯಕ್ತ ಭಾವ ಹೊಮ್ಮುವುದು ಹೃದಯದಿ,

ಎಂದೋ ಕಂಡ ಸಂತಸ, ಪಟ್ಟ ರೀತಿ ಅನನ್ಯ,

ಏನೋ ಸೆಳೆತ, ಹಗುರ ಹೃದಯದಲ್ಲಿ ಪುಳಕ,

ಪಯಣವೋ!, ಹಾರಾಟವೋ! ಎಲ್ಲವೂ ಸುಲಲಿತ,

ನಿನ್ನೆ ನಡೆದುಹೋದೆನೆಂಬ ಪರಿಚಯದ ಬಿಂಬ,

ಸಾಗುತ್ತಾ, ಸಾಗುತ್ತಾ ದಣಿವರಿಯದ ಪಯಣ,

ಮನದಲ್ಲಿ ಹಾಸುಹೊಕ್ಕಾಗಿದೆ ಸಂತಸದ ಪಯಣ,

ಎಲ್ಲಾ ಪಯಣವೂ ಹೀಗೆ ಇರಲಿ ಮಧುರ,

ಪಯಣದ ಆಯಾಸವಿಲ್ಲ, ಬೇಸರವಿಲ್ಲ,

ಸಂತಸ ಬಿಟ್ಟು ಬೇರೇನೂ ಅಲ್ಲಿ ಇರಲಿಲ್ಲ,

ಈ ದಾರಿ, ಈ ಪಯಣ ಅತಿ ಮಧುರ, ಅನಂತ.

ಗಣೇಶನ ಆಗಮನ

ಬಾ ಗಣೇಶ, ಪ್ರತಿ ವರುಷದಂತೆ

ಬಾದ್ರಪದ ಮಾಸ ಶುಕ್ಲ ಚೌತಿಯಂದು,

ನೀ ಬಂದು ನಮ್ಮ ಹರಸು,

ನೀ ಬಂದು ನಮ್ಮನ್ನೆಲ್ಲಾ ಒಗ್ಗೂಡಿಸು.


 ಅಮ್ಮನ ಕರೆದೊಯ್ಯಲಿ ಏಕಿಷ್ಟು ತವಕ,

ನೀ ಬರಲು ಸಂತೋಷ, ಸಡಗರ ನಮಗೆ,

ಮೂರು, ಐದು, ಏಳು ಇಪ್ಪತ್ತೊಂದು ದಿನ,

ನಮ್ಮ ಜೊತೆ  ನೀ ನೆಲೆಸಿರುವೆ ಬಂಧುವಾಗಿ.  

 

ಸಂಬಂಧಗಳ ಗಟ್ಟಿಗೊಳಿಸಲು ನೀ ಬಾ,

ನಮ್ಮ ಕಷ್ಟ ಕೋಟಲೆಗಳ ಕಳೆಯೆ ನೀ ಬಾ,

ವಿಘ್ನಗಳ ಪರಿಹರಿಸಿ ದಾರಿಯ ನೀ ತೋರು ಬಾ,

ಸಮಾಜದ ಸಾಮರಸ್ಯ ರಥವನೇರಿ ನೀ ಬಾ.

 

ಬರುವಾಗ ನೀ, ಜೊತೆ ಮಳೆಯ ಕರೆ ತಾ,

ಈ ಭುವಿಯ ತಂಪಾಗಿಸು, ಸಂತೈಸು ಬಾ,

ಹೊಸ ಯೋಚನೆಗೆ ಸ್ಫೂರ್ತಿಯಾಗಿ ಬಾ,

ಸಾಧನೆಗೆ ಶಿಲ್ಪಿಯಾಗಿ ಮನದೊಳು ನಿಲ್ಲು ಬಾ.


ಮಧುರವೋ? ನೋವೋ?

ಇದೆ ಜಾಗವಲ್ಲವೇ ? ನಾನು ಇಲ್ಲಿಯೇ ಬಿದ್ದದ್ದು , ಜ್ಞಾನ ತಪ್ಪಿದ್ದು , ಮತ್ತೆ ಜೀವನದಲ್ಲಿ ಏಳಲಾರದೆ ಪರಿತಪಿಸಿದ್ದು , ಇದೆ ಉದ್ಯಾನವಲ್ಲವೇ ? ನಾ ಇಷ್...