Sunday, November 1, 2026

ಮೌನ ನಂಬಿಕೆ

  

ದೇವಾ!,  ನಿನ್ನ ಯೋಜನೆ ಬಲ್ಲವರಾರು?

ಅದು ಸಮಯೋಚಿತವಾಗೇ ಇರುವುದು.


ಕೆಲವು ಸಮಯಗಳಲ್ಲಿ,

ಜೀವನದ ಪಯಣದ ಹಾದಿಯಲ್ಲಿ,

ಪ್ರಕ್ರಿಯೆಯ ದಾರಿಯಲ್ಲಿ

ನೋವುಗಳು, ಕಠಿಣ ಸವಾಲುಗಳಿರುವುದು,


ಆದರೆ ಎಂದಿಗೂ ಮರೆಯದಿರು,

ನಿನ್ನ ಕೂಗು, ನಿನ್ನ ಪ್ರಾರ್ಥನೆ

ದೇವರಿಗೆ ಕೇಳಿಸುತ್ತಿಲ್ಲವೆಂದು ಕಂಗೆಡದಿರು.


ದೇವರ ಮೌನವೆಂದರೆ

ನಿನ್ನ ಬಗ್ಗೆ ಗಮನವಿಲ್ಲವೆಂದಲ್ಲ, 

ನಿನಗಾಗಿ ಮಹತ್ತಾದದ್ದನ್ನು

ರೂಪಿಸುತ್ತಿದ್ದಾರೆಂಬ ಸಂಕೇತ.

No comments:

Post a Comment

ಮೌನ ನಂಬಿಕೆ

   ದೇವಾ!,  ನಿನ್ನ ಯೋಜನೆ ಬಲ್ಲವರಾರು? ಅದು ಸಮಯೋಚಿತವಾಗೇ ಇರುವುದು. ಕೆಲವು ಸಮಯಗಳಲ್ಲಿ, ಜೀವನದ ಪಯಣದ ಹಾದಿಯಲ್ಲಿ, ಪ್ರಕ್ರಿಯೆಯ ದಾರಿಯಲ್ಲಿ ನೋವುಗಳು, ಕಠಿಣ ಸವಾಲು...