ನಾವು
ಪಯಣಿಗರು,
ಎಷ್ಟು
ದೂರ ಪಯಣ ತಿಳಿದವರಿಲ್ಲ,
ಈ
ಪ್ರಯಾಣ ಎಂದು ಆರಂಭವಾಯಿತೋ?,
ಕೊನೆ ಎಂದೋ, ಅರಿತವರಿಲ್ಲ.
ಎಲ್ಲರೂ
ಬಂದು ಹೋಗುವವರೇ!,
ನೆಲೆ
ನಿಲ್ಲುವವರು ಬಲು ವಿರಳ,
ಇಂದಲ್ಲ
ನಾಳೆ ನಮ್ಮ ಪಯಣ ನಿಶ್ಚಿತ.
ಕೆಲವರು
ಇಲ್ಲಿ ಹಿರಿಯರು,
ಕೆಲವರು
ಇಲ್ಲಿ ಕಿರಿಯರು,
ಮತ್ತೆ
ಕೆಲವರು ಸಮ ವಯಸ್ಕರು,
ಎಲ್ಲರೂ
ಕಾಯುತ್ತಿರುವವರೇ!.
ನಮ್ಮ
ಜೀವನದ ಉದ್ದೇಶ, ಆಶ್ಚರ್ಯ,
ಬಂದದ್ದು
ಏಕೆ?, ಪ್ರಶ್ನಾರ್ಥಕ!,
ಅರಿವಿಲ್ಲದೆ
ಸಂಸಾರದಲ್ಲಿ ತಲ್ಲೀನ,
ಬಾಳ
ಪಯಣ ನಿರಂತರ, ಅನಂತ.

No comments:
Post a Comment