Sunday, October 11, 2026

ತಾಯಿನಾಡಿನ ಘನತೆ

ವರುಷಗಳೇ ಉರುಳುವುವು ಯಾರಿಗೂ ಕಾಯದೆ,

ನನ್ನ ದೇಶದ ಘನತೆ, ಗೌರವ ಎಂದೂ ಮಾಸದಿರಲಿ.

ನನ್ನ ದೇಶದ ಆತ್ಮ, ಅದು ಸನಾತನ, ನಿತ್ಯ ನೂತನ,

ತಾಯಿ ಭಾರತೀಯ ಹೆಮ್ಮೆ, ಘನತೆಯ ನಾವು ಕಾಯುವ.

 

ದೇಶ ದ್ರೋಹಿಗಳು ಹಲವಾರು ಇಹರು ಇಂದು ಇಲ್ಲೇ,

ಉಪ್ಪು ತಿಂದ ಮನೆಗೆ ಎರಡು ಬಗೆಯಲು ಸದಾ ಮುಂದು.

ಅವಳ ಕರುಣೆ ನಮ್ಮ ಮೇಲಿರಲಿ ಅವರ ಸದೆಬಡಿಯಲು,

ಪ್ರಾಣ ಇಂದೇ ಮುಡಿಪು, ಅವಳ ಗೌರವ ಕಾಪಾಡಲು.

 

ಇಂದು ಇಹರು ದೇಶ ಪ್ರೇಮಿಗಳಿ ಅವಳ ಕಾಯುತಾ,

ಸಮಯ ಒದಗಿ ಬರಲು ಪ್ರಾಣವನೇ ನೀಡುವರು.

ತಾಯ ಸೇವೆಗೆ ಸದಾಸಿದ್ಧ, ಹೃದಯದಲಿ ಕಾಣ್ವರೂ,

ದೇಶದ್ರೋಹಿಗಳ ಮುಖವಾಡ ಕಳಚಿ, ಘರ್ಜಿಸುವರು.


ಸಂತಸದ ಹೆಜ್ಜೆಗಳು

ಬಾ ಜೊತೆಯಾಗಿ ನಲಿಯುತಾ ಹೆಜ್ಜೆ ಹಾಕೋಣ,

ಕೈ ಹಿಡಿದು ಗುನುಗುತ್ತಾ ನಗುತ್ತಾ ಮಾತಾಡೋಣ.

ಜೀವನ ಜಂಜಾಟದಲ್ಲಿ ಕಷ್ಟ-ನಷ್ಟಗಳು ಇದ್ದದ್ದೇ!,

ಈ ದಿನ ಎಲ್ಲವ ಮೂಲೆಗುಂಪಾಗಿಸಿ ನಲಿಯೋಣ.

 

ತಲೆಯಲ್ಲಿ ತುಂಬಿದೆ ನೂರೆಂಟು ಗಂಟು-ಮೂಟೆ,

ಯಾವುದೂ ಪ್ರಯೋಜನಕ್ಕೆ ಬಾರದ ಘನ ಕಸವದು.

ನೆಮ್ಮದಿಯ ಹಾಳುಮಾಡಿ, ಸಿಹಿ ನಿದ್ದೆ ಕೆಡಿಸುವುದು,

ಜೀವನ ಪ್ರೀತಿಯ ಕಸಿದುಕೊಂಡು ರಕ್ತ ಹೀರುವುದು.

 

ಮನದ ಕೊಳೆಯನ್ನೆಲ್ಲಾ ಧ್ಯಾನದಿ ತೊಳೆಯೋಣ,

ಹೊಸದಿನ, ಹೊಸಬಗೆಯಲಿ ನಗುತಾ ನಲಿಯೋಣ,

ನವರಾತ್ರಿಯಲ್ಲಿ ತಾಯ ಆಶೀರ್ವಾದ ಪಡೆಯೋಣ,

ನಮ್ಮೆಲ್ಲಾ ನೋವು-ನಲಿವುಗಳ ಸಮದಿ ಸವಿಯೋಣ.

ತಾಯಿನಾಡಿನ ಘನತೆ

ವರುಷಗಳೇ ಉರುಳುವುವು ಯಾರಿಗೂ ಕಾಯದೆ, ನನ್ನ ದೇಶದ ಘನತೆ, ಗೌರವ ಎಂದೂ ಮಾಸದಿರಲಿ. ನನ್ನ ದೇಶದ ಆತ್ಮ, ಅದು ಸನಾತನ, ನಿತ್ಯ ನೂತನ, ತಾಯಿ ಭಾರತೀಯ ಹೆಮ್ಮೆ, ಘನತೆಯ ನ...