ಅವನು ನನಗೆ ಬೇಕಾದವನು,
ನಾನು ಅವನಿಗೆ ಬೇಕಾದವನು.
ಒಂದೇ ನಾಣ್ಯದ ಎರಡು ಮುಖಗಳು,
ಒಂದೇ ಹಾದಿಯ ಪಯಣಿಗರು - ಸ್ನೇಹಿತರು .
ಗೆಳೆಯ,
ಗೆಳೆತನ – ದಾರಿ ಒಂದೇ, ಹೆದ್ದಾರಿ.
ನದಿಯಂತೆ
ಹರಿಯುವ ಜೀವಪಯಣ,
ಬೆಟ್ಟ,
ಗುಡ್ಡ, ಕಣಿವೆ ದಾಟಿ ಸಾಗುವ ಪಯಣ.
ಪುಟಿದೇಳುವೆವು, ದಾಹವಿದೆ, ದಣಿವರಿಯೆವು –
ಆದರೂ ಗುರಿಯೊಂದೇ, ನಿಲ್ಲದೆ ಸಾಗುವೆವು.
ಕಡಲು ಸ್ನೇಹದಿ ಸೇರುವ ತವಕ,
ಕೊನೆಯಿರದ
ಅಸೀಮ ಸಾಗರ.
ಅಲ್ಲಿ
ನಾವೆಲ್ಲರೂ ಒಂದಾಗಿ,
ಸ್ನೇಹದ
ಅಲೆಗಳಲ್ಲಿ ತೇಲುವ.
No comments:
Post a Comment