ಕನಸ ರೆಕ್ಕೆಗಳ ಹರವಿ ನಭಕ್ಕೆ ಹಾರುವ ತೆರದಿ,
ನಿನ್ನೊಳ ಅದ್ಭುತ ಶಕ್ತಿಯ ಅನಾವರಣಗೊಳಿಸಲು ನಿನಗೆ ಧೈರ್ಯವಿರಲಿ.
ನೂರಾರೊಳಗೆ ನೀನಾಗೇ ಮಿಂಚುವ ಸ್ವಯಂಭುವಾಗೇ,
ನಿನ್ನ
ಜೀವನದ ಪ್ರೀತಿಯಲಿ ಜೀವಿಸಲು ನಿನಗೆ ಧೈರ್ಯವಿರಲಿ.
ಲೋಕದೊಳು ಸತ್ಯಕ್ಕೆ ಜೊತೆಯಾಗಿ ನಿಲ್ಲುವ ಸ್ಥೈರ್ಯವಿರಲು,
ಜೀವನದ ಸವಾಲುಗಳ ಎದೆಗುಂದದೆ ಎದುರಿಸಲು ನಿನಗೆ ಧೈರ್ಯವಿರಲಿ.
ಕಂಡ ಕನಸುಗಳ ನನಸಾಗಿಸುವ ಉತ್ಸಾಹದಲಿ,
ಸಾಧನೆಯ ಪಥದಲ್ಲಿ ಗೆಲುವಿಗೆ ಎದೆಯೊಡ್ಡಲು ನಿನಗೆ ಧೈರ್ಯವಿರಲಿ.
ಹಾದಿಯಲಿ ಕಲ್ಲು ಮುಳ್ಳುಗಳೇ ಇರಲಿ,
ನಗುತ ನೋವ ಮರೆಯುತ ಹೆಜ್ಜೆ ಮುಂದಿಡಲು ನಿನಗೆ ಧೈರ್ಯವಿರಲಿ.
ಸಾಕು ವಿಶ್ರಾಂತಿ, ಸಾಕು ಈ ನಿದ್ದೆ, ಬೆಳಕ ಕಾಣುವ ತವಕದಿ,
ಅಂಧಕಾರವ ಧಾಟುತಾ ಸಚ್ಚಿದಾನಂದವ ಪಡೆಯಲು ನಿನಗೆ ಧೈರ್ಯವಿರಲಿ.
No comments:
Post a Comment