ಸೂರ್ಯೋದಯ ಆಗಸವ ಆಲಿಂಗಿಸುತ್ತಿದೆ,
ಕತ್ತಲೆ
ಕಳೆದು ಚಿನ್ನದ ಬಣ್ಣ ಬಳಿಯುತ್ತಿದೆ.
ತಾಜಾತನದಲ್ಲಿ ಪ್ರಕೃತಿ ಬೆಳ್ಳನೆ ಹೊಳೆಯುತ್ತಿದೆ,
ಮಂಜಿನ
ಹನಿಗಳು ಎಲೆಗಳ ಮೇಲೆ ಮಿಂಚುತ್ತಿದೆ.
ಮಂಜಿನ
ಹನಿಗಳು ಕನಸುಗಳ ಜೋಡಿಸುತ್ತಿದೆ,
ಮನವು ಕನಸಿನ ರೆಕ್ಕೆ ಹರಡಿ ಹಾರುತ್ತಿದೆ.
ಬೆಳಗಿನ
ಬೆಳಕಿನಲ್ಲಿ ಅದೇನೋ ಹುರುಪಿದೆ,
ಮನದಲ್ಲಿ
ಹೊಸ ಭರವಸೆಗಳ ಹೊತ್ತು ತರುತ್ತಿದೆ.
ಗಾಳಿ ಮಂದವಾಗಿ ಪ್ರಕೃತಿ ಶಾಂತವಾಗಿದೆ,
ಬಿಳಿ ಮೋಡಗಳ ನೆರಳಲ್ಲಿ ದಿನ ಆರಂಭವಾಗಿದೆ.
ಅಂತರಂಗದಲ್ಲಿ ಪ್ರಾರ್ಥನೆಯ ದೀಪ ಬೆಳಗಿದೆ,
ತೆರೆದ
ಹೃದಯದಿ ಮನದಲ್ಲಿ ಕನಸ ತೇರು ಹೊರಟಿದೆ.
ಓ ಶುದ್ಧ ಬೆಳಕೇ ಧರೆಗೆ ಬಾ,
ಕೈ ಮುಗಿದು ನಿನ್ನನೇ ಆರಾಧಿಸುತ್ತಿರುವೆ.
ನಿನ್ನೊಳ
ಆ ಶಕ್ತಿ, ಎನ್ನ ಹೃದಯದಲಿ ಇಳಿಯಲಿ,
ನನ್ನ ಕನಸುಗಳ ಸಾಧಿಸುವ ದಾರಿಯ ತೋರಲಿ.
No comments:
Post a Comment