Sunday, June 21, 2026

ಜೀವನದ ಹಾದಿ

ಮಗನೇ, ನಾನು ನಿನಗೆ ಹೇಳುವೆ:

ನನ್ನ ಜೀವನವು ಹೂವಿನ ಹಾಸಿಗೆ ಆಗಿರಲಿಲ್ಲ.

ಅದರಲ್ಲಿ ನೋವಿನ ಒರತೆಗಳಿವೆ,

ಕನಸಿನ ಚೂರುಗಳಿವೆ, ಹೃದಯದಲ್ಲಿ

ಹರಿದುಹೋದ ನೆನಪುಗಳು, ಮಡುಗಟ್ಟಿವೆ

ಕಲ್ಲು ಮುಳ್ಳುಗಳ ನೆಲದ ಕಠಿಣ ನಡೆ

ಕಾಲು ನೋವಿನ ಭಾರದ ಹೊರೆಯಾಗಿವೆ.

ಎಲ್ಲಾ ಕಾಲದಲ್ಲೂ ನಾನು ಹತ್ತುತ್ತೇನೆ,

ಕಷ್ಟದ ಬೆಟ್ಟಗಳ ಹತ್ತಿ ಇಳಿದಿದ್ದೇನೆ,

ಊರಿನ ಮೂಲೆಗಳನ್ನು ತಿರುಗಿದ್ದೇನೆ,

ಕೆಲವೊಮ್ಮೆ ಅಳುತ್ತಾ ಕತ್ತಲೆಯಲ್ಲಿ ಹೋಗುತ್ತಿದ್ದೆ

ಎಲ್ಲಿ ಬೆಳಕಿನ ಕೊರತೆಯೋ ಅಲ್ಲಿ, ಹೃದಯದಲ್ಲಿ.

ಹುಡುಗ, ನೀನು ಗೆಲುವಿಗೆ ಬೆನ್ನು ತೋರಿಸಬೇಡ.

ನೋವಿಗೆ ಹೆದರಬೇಡ ದೈರ್ಯದಿಂದ ಎದುರಿಸು.

ಗೆಲುವಿಗೆ ದಯೆಯಿಲ್ಲ ಕಠಿಣ ಪರಿಶ್ರಮ ಬಯಸುವುದು.

ಬೀಳಲು ಹೆದರಬೇಡ, ದೈರ್ಯದಿಂದ ಎದ್ದು ನಿಲ್ಲು

ನನ್ನ ಹಾರೈಕೆ ನಿನಗಾಗಿ ಸದಾ ಇದೆ - ಮುಂದೆ ಸಾಗಲು

ಸಾಧಿಸು ನನ್ನ ಕನಸುಗಳ ದೋಣಿಯ ಹತ್ತಿ ಸಾಗು

ನನಸಾಗಿಸುವ ಛಲ ನಿನ್ನಲ್ಲಿರಲಿ - ಗೆಲುವಿನಲ್ಲಿ ನಾನಿರುವೆ.

 

ಪ್ರೇರಣೆ: ಲ್ಯಾಂಗ್ಸ್ಟನ್ ಹ್ಯೂಸ್

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...