Saturday, June 27, 2026

ನಾನು ಭಾರತೀಯ!

ನಾನು ಭಾರತೀಯ!

ವಂದೇ ಮಾತರಂ ಹಾಡುತ್ತೇನೆ,

ಕನ್ನಡ ನನ್ನ ಮಾತೃಭಾಷೆ,

ನಾನು ದಕ್ಷಿಣದವನೆಂಬ ಹೆಮ್ಮೆಯಿದೆ,

ನನ್ನ ಮೈಬಣ್ಣ ಗೋಧಿಬಣ್ಣ.

 

ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ,

ಎಲ್ಲಾ ಜನರನ್ನು ಗೌರವಿಸುತ್ತೇನೆ,

ವೈವಿಧ್ಯ ಸಂಸ್ಕೃತಿಯ ಅರಿವಿದೆ,

ಬಹು ದೇವರ ಪೂಜಿಸುವ ನಾಡು ನನ್ನದು,

ಮಣ್ಣು,ಕಲ್ಲು, ನದಿ, ಮರ, ಗಿಡ, ಎಲ್ಲವು ದೇವರೇ.

 

ಯಾವುದು ಸತ್ಯವೋ ಅದನ್ನೇ ಪಾಲಿಸುತ್ತೇನೆ,

ಯಾವುದು ನಿತ್ಯವೋ ಅದೇ ಉಸಿರಾಗಿದೆ,

ಯಾವುದು ಅವಿನಾಶಿಯೋ ಅದೇ ನಂಬಿಕೆಯಾಗಿದೆ,

ಯಾವುದು ಶ್ರೇಷ್ಠವೋ ಅದೇ ನಾನಾಗಿಹೆ,

ಶ್ರೇಷ್ಠತೆಯ ಬೆಳಕಿನಲ್ಲಿ ನಾನು ಜ್ಯೋತಿ ಆಗಿಹೆ.

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...