Saturday, June 20, 2026

ಕನಸು

ಕನಸುಗಳ ಬಿಗಿದಪ್ಪಿ,

ಉಸಿರಾಗಿಸಿಕೊಳ್ಳೋಣ.

ಕನಸು ನಮ್ಮಯ ಪ್ರಾಣವೇ,

ಕನಸಿಲ್ಲದ ನಾವು ಹೆಣವೇ!

 

ರೆಕ್ಕೆಗಳು ಬೇಕು,

ಹಕ್ಕಿ ಹಾರಲು,

ಕನಸುಗಳು ಬೇಕು,

ನಾವು ಬಾಳಲು.

 

ಕನಸುಗಳ ಬಿಗಿದಪ್ಪಿ,

ನಮ್ಮದಾಗಿಸಿಕೊಳ್ಳೋಣ.

ದೊಡ್ಡ ಕನಸುಗಳ ಬೆನ್ನಹತ್ತಿ,

ಆಗಸದಲ್ಲಿ ತೇಲೋಣ.

 

ಕನಸೇ ಬಾ!, ನನ್ನನಪ್ಪು,

ನಿದ್ದೆಯ ಕೆಡಿಸಿ ನನ್ನನೊಪ್ಪು.

ತೇಲುತ ಆಗಸದಿ ಸಂತಸಬಡು,

ನನಸಾಗಿಸುತ ಜೀವಕ್ಕೆ ಸಂತಸಕೊಡು.   


No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...