Saturday, June 20, 2026

ನಗುವಿನ ನದಿ

ಮನಸ್ಸು ನಿರ್ಮಲ, ನಿರಾಳ ಆಗಸದಂತೆ,

ದಿನವೂ ನಗುತ್ತೇನೆ, ಎದುರಿಗೆ ಬಂದವರ ನೋಡಿ,

ಕ್ಷಣಮಾತ್ರದ ಕ್ರಿಯೆ ಅದು, ಪ್ರತಿಕ್ರಿಯೆಗೆ ಕಾಯದೆ,

ಎದುರು ಬಂದವರಿಗಾಗಿ ನನ್ನ ಹೂ ನಗು, ಸ್ವಾಗತ,

ಕೆಲವರು ನನ್ನ ಮಂದಹಾಸಕ್ಕೆ ನಗುವರು,

ಮತ್ತೆ ಕೆಲವರು ಮುಖ ಗಂಟ್ಟಿಕ್ಕುವರು,

ಮನದಲ್ಲಿ ನೂರು ಕದನವಿದೆ ನಿಲ್ಲದೆ,

ಕದನದ ಪರಿಣಾಮ ಮುಖದಲ್ಲೇಕೆ?

ಮನದಲ್ಲಿ ಮಿಂಚು ಗುಡುಗುಗಳಿರಲಿ,

ಕಣ್ಣಲ್ಲಿ ಹೊಸತನದ ಚೈತನ್ಯವಿರಲಿ,

ತುಟಿಯಂಚಲಿ ಮಿನುಗಲಿ ತಾರೆಯ ನಗು,

ಜಾರಿ ಹೋಗುವ ಕ್ಷಣಗಳ ಆನಂದಿಸುತ್ತೇನೆ,

ಮತ್ತೆ ಅವು ಎಂದೂ ಬಾರವು, ಅವು ಕ್ಷಣಿಕ,

ಮನಸ್ಸು ಕೋಮಲ, ಮಧುರ, ಹರಿವ ನದಿಯಂತೆ,

ನಿರ್ಮಲ ಮನಸ್ಸಿನ ಗಾನ ಲಹರಿ ಹರಿಯಲಿ,

ಹರಿವ ಜಂಜಾಟದಲ್ಲಿ ಕಲರವ ಕಳೆಯದಿರಲಿ.

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...