ನನ್ನ
ಕನಸುಗಳ ಬಹುತೇಕ ಮರೆತಿದ್ದೆ.
ಅದು
ನನ್ನ ಮನದಲ್ಲಿತ್ತು,
ನನ್ನ
ಕಣ್ಣ ಮುಂದೆ,
ಸೂರ್ಯನಂತೆ
ಪ್ರಕಾಶಮಾನ —
ನನ್ನ
ಕನಸು.
ಬಂಗಾರ
ಬಣ್ಣದ ಕನಸು.
ತದನಂತರ
ಮನದ ತಡೆ ಗೋಡೆ ಏರಿತು,
ನಿಧಾನವಾಗಿ
ಬೆಳೆದಿತ್ತು,
ನಿಧಾನವಾಗಿ
ಗೊತ್ತಾಗದೆ,
ನನಗೂ
ನನ್ನ ಕನಸಿನ ನಡುವೆ.
ಆಕಾಶವನ್ನು
ಮುಟ್ಟುವವರೆಗೂ ಏರಿತು—
ಗೋಡೆ.
ನೆರಳು.
ಕೈ
ಕಟ್ಟಿಹಾಕಿತ್ತು ಕತ್ತಲು.
ನಾನು
ಕಪ್ಪು.
ನಾನು
ನೆರಳಿನಲ್ಲಿ ಬೆಚ್ಚಗೆ ಮಲಗಿದೆ.
ಕತ್ತಲು
ನನ್ನ ಸುತ್ತಲೂ,
ನನ್ನ
ಕನಸಿನ ಬೆಳಕು ಮರೆಯಾಗಿತ್ತು,
ಕನಸ
ಬೆಳಕು ನನ್ನ ಮುಂದೆ ಇರಲಿಲ್ಲ,
ನನ್ನ
ಮನದಲ್ಲಿ ಕಾರ್ಮೋಡ.
ಕಣ್ಣಿಗೆ
ಕತ್ತಲ ದಪ್ಪ ಗೋಡೆ.
ಕರಿ
ನೆರಳು.
ಮನದಲ್ಲಿ
ಅಳುಕು.
ಭಯ.
ಜವರಾಯನ
ನೆಂಟತನ ಹತ್ತಿರ.
ಇನ್ನು
ಹತ್ತಿರ.
ಭಯಾನಕ.
ಕರಿ
ನೆರಳು.
ಕತ್ತಲ
ಸಾಮ್ರಾಜ್ಯದಲ್ಲಿ
ತೂರಿ
ಬಂದಿತ್ತು ಬೆಳಕಿನ ಸಣ್ಣ ಕಿರಣ.
ಹೊಸ
ಭರವಸೆ.
ಹೊಸ
ಕನಸಿನ ಹಂಬಲ.
ಮನದಲ್ಲಿ
ಕನಸಿನ ಮೊಳಕೆ.
ಕೈ
ಕಟ್ಟು ಬಿಚ್ಚಿತ್ತು ಬೆಳಕು.
ನನ್ನ
ಕೈಗಳು!
ನನ್ನ
ಕತ್ತಲ ಕೈಗಳು!
ಬಿಡುಗಡೆಗೆ
ಕಾಯುತ್ತಿತ್ತು.
ಹಾರಲು.
ಗೋಡೆಯನ್ನು
ಭೇದಿಸಲು!
ನನ್ನ
ಕನಸಗಳ ರೆಕ್ಕೆ ಬಲಿತಿತ್ತು!
ಕತ್ತಲೆಯ
ಛಿದ್ರಗೊಳಿಸಿದೆ,
ಕರಿ
ನೆರಳ ನುಂಗಿ ಹಸಿವ ನೀಗಿಸಿದೆ,
ಬೆಳಕ
ನೀರ ಕುಡಿದು,
ಕನಸ
ನೀರಡಿಕೆ ಬಸಿದು,
ನಭಕ್ಕೆ
ಹಾರಿದೆ,
ಮನದ
ಅಂಕುಶಗಳ ಕುಟ್ಟಿ,
ಕನಸ
ಬೆಳಕಿನ ಕಡೆಗೆ.
ಮುನ್ನುಗಿದೆ.
ದಣಿವಿಲ್ಲದೆ.
ನನ್ನ
ಕನಸುಗಳ ಮಡಿಲಿಗೆ.
- ಪ್ರೇರಣೆ:
ಲ್ಯಾಂಗ್ಸ್ಟನ್ ಹ್ಯೂಸ್

No comments:
Post a Comment