ಕತ್ತಿಯಿಂದ ತಿವಿದರು,
ಬಂದೂಕು ಗುಂಡುಗಳಿಂದ ಸುಟ್ಟರು,
ದೇವಸ್ಥಾನಗಳ ಲೂಟಿ ಮಾಡಿದರು,
ನಮ್ಮವರ ಸಮಾಧಿಯ ಮೇಲೆ ಅವರ ವೈಭವ,
ಕಾಲ ಎಲ್ಲವ ಮರೆಯಿಸಿದೆ,
ಸೂರ್ಯ ಮತ್ತೆ ಸುಡುತ್ತಿದ್ದಾನೆ,
ನಮ್ಮ ನಾಯಕರು ಕಾಲು ನೆಕ್ಕುತ್ತಿದ್ದಾರೆ,
ಉಂಡ ಮನೆಗೆ ದ್ರೋಹ ಬಗೆವರ ಸಂಖ್ಯೆ ಹೆಚ್ಚಿದೆ,
ನಮ್ಮ ಉಧಾರತೆಗೆ ನಾವು ಬೆಲೆ ತೆರುತ್ತಿದ್ದೇವೆ,
ನಮ್ಮವರಿಂದಲೇ ನಾವು ಕಡೆಗಣಿಸ್ಪಟ್ಟಿದ್ದೇವೆ,
ನಗುವುದ ನಿಲ್ಲಿಸಿದ್ದೇವೆ,
ಪ್ರೀತಿಸುವುದ ಮರೆಯದೇ,
ಬದುಕುವುದ ಮರೆಮಾಚದೆ,
ಅವರು ದ್ರೋಹ ಬಗೆಯುತ್ತಲೇ ಇದ್ದಾರೆ,
ನಾವು ಕಾಯುತ್ತಲೇ ಇದ್ದೇವೆ,
ನಾವು ಬದುಕುವುದ ನಿಲ್ಲಿಸುವುದಿಲ್ಲ,
ನಮ್ಮ ಜೀವನ ಪ್ರೀತಿ ಸಾಯುವುದಿಲ್ಲ,
ಮೆರೆಯುವವರು ನಾಶವಾಗಲಿದ್ದಾರೆ,
ದ್ರೋಹಿಗಳು ಬಂದುಹೋಗುವರಷ್ಟೇ!,
ನಾವು ಅವಿನಾಶಿಗಳು,
ನಾವು ಚೇತನರು.....

No comments:
Post a Comment