Saturday, June 27, 2026

ಅನಂತ!

ಈ ರಾತ್ರಿ ಸುಂದರವಾಗಿದೆ,

ನನ್ನ ಜನರ ಮುಖದಂತೆ,

ರಾತ್ರಿ ತಾರೆಗಳು ಮಿನುಗುತ್ತಿವೆ,

ನನ್ನ ಜನರ ಕಣ್ಣುಗಳಂತೆ,

ಬೆಳಗಿನ ತೇಜ ಸೂರ್ಯ,

ನನ್ನ ಜನರ ಹೊಳೆವ ಆತ್ಮದಂತೆ,

ಶಕ್ತಿ ಎಂದಿಗೂ ಅವಿನಾಶಿ,

ರೂಪ ಮಾತ್ರ ಬೇರೆಬೇರೆ,

ನನ್ನ ಜನರ ಕೀರ್ತಿಯಂತೆ,

ನನಗೆ ಕೊನೆ ಎಂಬುದಿದೆ,

ನಾನು ಅನಂತದಲ್ಲಿ ಅನಂತ,

ನನ್ನೊಳಗೆ ನಾನು,

ಅನಂತದೊಳು ಶೂನ್ಯ,

ನಾನು ನಾನೇ, ಅನಂತದ ಅನಂತ...

No comments:

Post a Comment

ಮಧುರವೋ? ನೋವೋ?

ಇದೆ ಜಾಗವಲ್ಲವೇ ? ನಾನು ಇಲ್ಲಿಯೇ ಬಿದ್ದದ್ದು , ಜ್ಞಾನ ತಪ್ಪಿದ್ದು , ಮತ್ತೆ ಜೀವನದಲ್ಲಿ ಏಳಲಾರದೆ ಪರಿತಪಿಸಿದ್ದು , ಇದೆ ಉದ್ಯಾನವಲ್ಲವೇ ? ನಾ ಇಷ್...