Saturday, November 1, 2025

ನನ್ನ ಉಸಿರು ಕನ್ನಡ

ನಮ್ಮಮ್ಮನ ನುಡಿ ಕನ್ನಡ,

ನಾನಾಡುವ ನುಡಿ ಕನ್ನಡ,

ನನ್ನ ಕನಸಿನ ನುಡಿ ಕನ್ನಡ,

ನನ್ನ ಉಸಿರು ಕನ್ನಡ, ನನ್ನ ಭಾಷೆ ಕನ್ನಡ.

 

ಅತಿಮಧುರ ನನ್ನೀ  ಕನ್ನಡ ನುಡಿಯು,

ಹೂಜೇನಿನ ಸಿಹಿಯಂತೆ ನನ್ನೀ ನುಡಿಯು,

ಹಕ್ಕಿಗಳ ಇಂಚರದಂತೆ ಶುಭ ನುಡಿಯು,

ನನ್ನ ಉಸಿರು ಕನ್ನಡ, ನನ್ನ ಭಾಷೆ ಕನ್ನಡ.

 

ತಂಗಾಳಿಯ ಶ್ರೀಗಂಧದ ಸಿರಿ ನುಡಿಯು,

ಕಲ್ಲಿನಲ್ಲಿ ಅರಳುವ ಕಲೆಯ ನುಡಿಯು,

ಹರಿಯುವ ನದಿಗಳ ಕಲರವದ  ಹೊನ್ನುಡಿಯು,

ನನ್ನ ಉಸಿರು ಕನ್ನಡ, ನನ್ನ ಭಾಷೆ ಕನ್ನಡ.

 

ಪ್ರಾಚೀನ ಶಾಸ್ತ್ರೀಯ ಭಾಷೆ ನನ್ನೀ ನುಡಿಯು,

ಕವಿ ಕೋವಿದರ ಒಲವಿನ ನಲ್ನುಡಿಯು,

ರಾಜ ಮಹಾರಾಜರ ವೀರ ನುಡಿಯು,

ನನ್ನ ಉಸಿರು ಕನ್ನಡ, ನನ್ನ ಭಾಷೆ ಕನ್ನಡ.

 

ಮನೆಮನಗಳಲ್ಲಿ ಕನ್ನಡ ಕಲರವ ಕೇಳಲಿ,

ಗೆಜ್ಜೆಯ ನಾದದ ಕಿವಿಗಳಿಗಿಂಪಿನ ನುಡಿಯು

ಕನ್ನಡ ಬಳಸಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ,

ನನ್ನ ಉಸಿರು ಕನ್ನಡ, ನನ್ನ ಭಾಷೆ ಕನ್ನಡ.  

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...