ಮಳೆ ಜೋರಾಗಿದೆ, ನಿಲ್ಲುವ ಸೂಚನೆಯಿಲ್ಲದೆ,
ಮಳೆಯ ತಂಪು ಗಾಳಿ ಮಂದವಾಗಿ ಬೀಸುತ್ತಿದೆ.
ರಸ್ತೆಗಳಲ್ಲಿ ಜನವೋ ಜನ ಮೆರವಣಿಗೆಯಲ್ಲಿ,
ಗಲ್ಲಿಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ಗಣಪನ ವಿಧಾಯಕ್ಕೆ ತಮಟೆಯ ನಾದ ನರ್ತಿಸುತ್ತಿದೆ,
ಮಳೆಯಲ್ಲಿ ನಾದಕ್ಕೆ ಮಕ್ಕಳ ನೃತ್ಯ- ಅಮೋಘ.
ಮಳೆಯ ಲೆಕ್ಕಿಸದೆ ಹುಡುಗ, ಹುಡುಗಿಯರ ಹುಲಿ ಕುಣಿತ,
ಭಾವ ಬಂಧನ ಬಡಾವಣೆಯ ಜನರಲ್ಲಿ ಸಂತೃಪ್ತ ನಗೆ.
ಮನೆ ಮೇಲ್ಮಹಡಿಗಳಿಂದ ಜನ ಕಣ್ಣು ಹಾಯಿಸುತ್ತಿದ್ದಾರೆ,
ಗಲ್ಲಿಗಳಲ್ಲಿ ಗಣೇಶನ ಮೆರವಣಿಗೆ ವೈಭವದಿಂದ ಸಾಗುತ್ತಿದೆ.
"ಗಣೇಶ ಬಪ್ಪಾ ಮೋರೆಯಾ!" ಘೋಷಣೆ ಮೊಳಗುತ್ತಿದೆ,
ಜನರ ಘೋಷಣೆ ಆಕಾಶವ ನಡುಗಿಸುತ್ತಿದೆ.
ಆಕಾಶದಲ್ಲಿ ಬಣ್ಣದ ಪಟಾಕಿಗಳು ಹಾರುತ್ತಿವೆ,
ರಾತ್ರಿಯ ಕತ್ತಲಲ್ಲಿ ಬಣ್ಣದ ಚಿತ್ತಾರವ ಬೆಳಗಿಸುತ್ತಿವೆ.
ಕೊನೆಗೆ ವಿದಾಯ, ಕಣ್ಣೀರು, ಸಂತೋಷದ ಕೂಗು—
ಗಣೇಶನು ಹೊರಟ, ಆದರೆ ಹೃದಯದಲ್ಲಿ ಉಳಿದ,
No comments:
Post a Comment