Friday, November 7, 2025

ಇನ್ನೂ ಇದೆ!

ಮನದ ಚೌಕಟ್ಟಿನಲ್ಲಿ

ಸದಾ ಗಿಜಿಗುಟ್ಟುವ ವಾಹನಗಳ ಗದ್ದಲ,

ಶಬ್ದ, ಹೊಗೆಮನಸ್ಸಿನಲ್ಲಿ ತಳಮಳ.

ಗುರಿಯ ಕಡೆ ತದೇಕ ಚಿತ್ತ,

ಶಾಂತ ಮನದ ಚೌಕಟ್ಟಿನಲ್ಲಿ

ಕಲ್ಪನೆಗಳು ಗರಿಗೆದರುತ್ತವೆ.

 

ನೋವು, ಅಜ್ಞಾತವಾಸ, ಭ್ರಮೆಯ ಬದುಕು,

ಬಿಡದ ಛಲಬದುಕಿನ ಬಂಡಿ ಎಳೆಯಲೇಬೇಕು.

ಶಕ್ತಿಯಿದೆ, ಸರಿಯಾದ ದಾರಿಯ ಹುಡುಕಾಟದಲ್ಲಿ,

ಹಸಿವಿದ್ದರೆ ಮನದಲ್ಲಿ ಕನಸ ರೆಕ್ಕೆ ಬಿಚ್ಚುವುದು,

ಮಹಲ್ಲುಗಳ ನೆರಳಲ್ಲಿ ಅರಿವಿನ ಕಿಡಿ ಹೊಳೆವುದು.

 

"ಇನ್ನೂ ಇದೆ" ಎನ್ನುವ ಪ್ರತಿ ಕ್ಷಣದ ಧ್ಯಾನ,

ಜೀವನಪ್ರೀತಿಹೃದಯದ ಉಸಿರಿನ ಸ್ಪಂದನೆ.

ಯಾವುದೋ ಲಹರಿ ಮುನ್ನಡೆಸುವುದು ಮುಂದೆ,

ಮಾಡುವ ಕೆಲಸವೊಂದು ಆನಂದದ ನಡಿಗೆಯ ಹಾದಿ,

ನಡೆವ ಹಾದಿಯ ಬೇಸರ ಹಗುರಾಗಿಸುವುದು ಇಂದು.

 

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...