Sunday, November 2, 2025

ಗೆಲುವಿನ ಮಾರ್ಗ

ಸದಾ ಶ್ರದ್ದೆಯಿಂದ ಶ್ರಮೆ ಇರಲಿ,

ಅನುಮಾನ ಬೇಡ ನಿನ್ನ ಪರಿಶ್ರಮದಲ್ಲಿ,

ನಿನ್ನ ಒಟ್ಟು ಶಕ್ತಿ ಹರಿವುದೇ ಪ್ರಶ್ನೆ ಇರಲಿ,

ಮನಸ್ಸು ಸಂತೋಷದ ಕಡಲು - ಪರಿಕ್ರಮ.

 

ಶ್ರೇಷ್ಠತೆಯತ್ತ ನಡುಗೆಯಷ್ಟೇ ನಮ್ಮ ಕಾಯಕ,

ಅನುಮಾನ ಬೇಡ  ನೀ ನಡೆವ ಹಾದಿಯಲ್ಲಿ.

ಪರಿಪೂರ್ಣ ಶ್ರಮದ ಮೇಲಷ್ಟೇ ನಿನ್ನ ಹಕ್ಕು,

ಸಮಯ, ಶ್ರಮ, ತಾಳ್ಮೆ, ಇವೇ ಶ್ರೇಷ್ಠತೆಯ ಲಕ್ಷಣ,

 

ನೀನು ಅನನ್ಯ, ನಿನ್ನ ದಾರಿಯ ಕಂಡುಕೋ!,

ತೆರೆವುದು ಹೊಸ ಹಾದಿ, ಮನದ ಇಂಗಿತವ ಅರಿತುಕೋ!,

ನಿನ್ನವೇ ಕನಸುಗಳು ನುರಿವೆ, ರೆಕ್ಕೆಗಳ ಕಟ್ಟಿಕೋ!,

ಹೊರಗೆ ಕತ್ತಲೆ ಇರಲಿ ಬಿಡು, ಒಳಕಿಡಿ ದಾರಿ ತೋರುವುದು.

 

ಹೆಜ್ಜೆ ಹೆಜ್ಜೆಗಳಲ್ಲಿ ಶ್ರದ್ಧೆಯ ಬೆಳಕು ಚೆಲ್ಲು,

ಸಾಧನೆಯ ಹಾದಿ ಸುಲಭವಲ್ಲ - ಕಠಿಣವಿದೆ ನಿಜ,

ಹೃದಯದಲ್ಲಿ ಧೃಡತೆ, ಶ್ರಮದ ಉತ್ಸುಕತೆ ಇರಲಿ ಸಾಕು,

ನಂಬಿಕೆ, ತುಟಿಯಲ್ಲಿ ನಗು, ಗೆಲುವಿಗೆ ಬೇರೆ ಮಾರ್ಗ ಬೇಕೇ?

No comments:

Post a Comment

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ , ಅತಿನೀಲಿ ಕಿರಣಗಳ ರಕ್ಷಾ ಕವಚವದು , ಭೂಮಿಗೆ ತಂಪಾದ ಬೆಳಕ ನೀಡುವುದು , ಓಜೋನ್ ಅದರ ಹೆಸರು - ನಮ್ಮ ದೈವವದು .   ...