Friday, November 21, 2025

ದೂರ ಸಾಗಬೇಕಿದೆ

ಹಿಮವಂತನ ಅರಣ್ಯವಿದು- ಬಲು ಸುಂದರ,

ಶಿವನೆನ್ನುವರು ಅವನ - ಜಾಗದ ಒಡೆಯ,

ಅವನು ಅಂತರ್ಯಾಮಿ - ಎಲ್ಲವೂ ಕಾಣುವುದು,

ಮಂಜು, ಹಿಮದಿಂದ ತುಂಬಿದೆ - ಜಟಾಧಾರಿಯವನು.

 

ಎಷ್ಟು ದೂರ ನೋಡಿದರೂ ಬರೀ ಹಿಮವಷ್ಟೇ!,

ಮನೆ, ಗುಡಿಸಲು ಯಾವುದೂ ಕಾಣುವುದಿಲ್ಲ,

ಅರಣ್ಯ, ಹಿಮದ ನಡುವೆ ಶಾಂತ ಸರೋವರ,

ಕಟ್ಟಲು ಕವಿಯುತ್ತಿದೆ, ವರ್ಷದ ಕಾರ್ಗತ್ತಲಂತೆ.

 

ಒಂದು ನಿಮಿಷ ಮೌನ, ಗಾಡಿಯ ಗೆಜ್ಜೆಯ ಸದ್ದು,

ಏನನ್ನೋ ಮರೆತಿದ್ದೇನೆ - ಅಗೋಚರ, ಅನಿವಾರ್ಯ,

ತಣ್ಣನೆ ಹಿಮಗಾಳಿ, ನೆನಪ ಹೊತ್ತು ತಂದಿದೆ ನೂರಾರು,

ಮುಂದೆ ಹೋಗುವುದೋ!, ಹಿಂದೆ ತೆರಳುವುದೋ!, ದ್ವಂದ್ವ.

 

ಸುಂದರ ಕಾನನ, ಸುಂದರ ಹಿಮ,

ಕತ್ತಲು ಹಬ್ಬಿದೆ, ಆಳವಾಗಿದೆ,

ನನ್ನ ಮಾತುಗಳು ನೆನಪಾಗುತ್ತಿದೆ,

ತುಂಬಾ ದೂರ ಸಾಗಬೇಕಿದೆ ನಾನು ನಿದ್ರಿಸುವ ಮುನ್ನ,

ತುಂಬಾ ದೂರ ಸಾಗಬೇಕಿದೆ ನಾನು ಮಲಗುವ ಮುನ್ನ.

No comments:

Post a Comment

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ , ಅತಿನೀಲಿ ಕಿರಣಗಳ ರಕ್ಷಾ ಕವಚವದು , ಭೂಮಿಗೆ ತಂಪಾದ ಬೆಳಕ ನೀಡುವುದು , ಓಜೋನ್ ಅದರ ಹೆಸರು - ನಮ್ಮ ದೈವವದು .   ...