Saturday, October 25, 2025

ಮಳೆ - ಇಳೆ

 ಮಳೆ  ಇಳಿಯುತ್ತಿದೆ ಧರೆಗೆ,

ತಂಪನ್ನೆರೆಯುತ್ತಾ ಇಳೆಗೆ.

ಬೆವೆತು ಬಾಯಾರಿದ ಧರೆಗೆ,

ನೀರ ಹನಿಸುತ್ತಿದೆ ಇಳೆಗೆ.

 

ಕರಿ ಮೋಡಗಳು ಬಂದವು  ಆಗಸದಿಂದ,

ಹನಿ ಹನಿ ನೀರು ಬೊಗಸೆಯಲ್ಲಿ ಹಿಡಿದು.

ಜಗದ ಗಾಳಿ ಬೀಸಿ, ಬಂದ ಕಡೆಗೆ ಓಡುತ್ತಾ,

ವಾಯುಭಾರ ಒತ್ತಡದಿಂದ ಧರೆಗಿಳಿಯಿತು.

 

ಹನಿ ಹನಿ ನೀರು ಧರೆಗೆ ಸ್ಪರ್ಶಿಸುವುದು,

ಹೊಸ ಉತ್ಸಾಹದಿಂದ, ಜೀವಂತಿಕೆಯಿಂದ.

ಪುಳಕಿತ ಈ ಧರೆ, ಹೊಮ್ಮಿಸುವುದು ಶ್ರೀಗಂಧ,

ಇಳೆಯ ಸಸ್ಯ ಶಾಮಲೆ ನಲಿಯುವುದು.   

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...