Monday, October 20, 2025

ಮನವು ತಿಳಿಯಾಗಿದೆ

 

ಮಳೆ ನಿಂತ ಮೇಲೆ,

ಮೋಡಗಳು ಇಲ್ಲವಾದಂತೆ.

ಮನದಲ್ಲಿ ಇಂದೇಕೋ!,

ಭಾವನೆಗಳಿಲ್ಲದೆ ಖಾಲಿಯಾಗಿದೆ.

 

ತಿಳಿ ನೀಲಿ ಆಗಸದಲ್ಲಿ,

ಮೋಡಗಳಿಲ್ಲದೆ ಬಣಗುಟ್ಟಿದಂತೆ,

ನೀರವ ಮೌನ ತುಂಬಿ,

ಮನ ಇಂದೇಕೋ ಖಾಲಿಯಾಗಿದೆ.

 

ಅಮಾವಾಸ್ಯೆಯ ಕತ್ತಲಲ್ಲಿ,

ಕಣ್ಣು ಮಿಟುಕಿಸುವ ತಾರೆಗಳಿಲ್ಲದಂತೆ.

ಸದಾ ಭಾವದಲೆಗಳು ತುಂಬಿದ

ಮನ ಇಂದೇಕೋ ಖಾಲಿಯಾಗಿದೆ.

 

ತಿಳಿ ನೀರ ಕೊಳದಲ್ಲಿ,

ಸ್ವಚ್ಛತೆಯ ಶಾಂತತೆಯು ಅರಳಿದಂತೆ.

ಮನವು ತಿಳಿಯಾಗಿದೆ,

ಚಿಂತೆಯಿಲ್ಲದೆ ಇಂದೇಕೋ ಖಾಲಿಯಾಗಿದೆ.

 

ಸಾಲು ಸಾಲು ಹಬ್ಬಗಳಲ್ಲಿ,

ವಿರಾಮಕ್ಕೆ ಸಮಯವಿಲ್ಲದಂತೆ.

ಹಬ್ಬ ಮುಗಿದ ಮಾರನೆಯ ದಿನ,

ಕೆಲಸವಿಲ್ಲದೇ ಮನ ಖಾಲಿಯಾಗಿದೆ.

No comments:

Post a Comment

ಮನವು ತಿಳಿಯಾಗಿದೆ

  ಮಳೆ ನಿಂತ ಮೇಲೆ, ಮೋಡಗಳು ಇಲ್ಲವಾದಂತೆ. ಮನದಲ್ಲಿ ಇಂದೇಕೋ!, ಭಾವನೆಗಳಿಲ್ಲದೆ ಖಾಲಿಯಾಗಿದೆ.   ತಿಳಿ ನೀಲಿ ಆಗಸದಲ್ಲಿ, ಮೋಡಗಳಿಲ್ಲದೆ ಬಣಗುಟ್ಟಿದಂತೆ, ...