ಮರದ ಟೊಂಗೆಯ ತುದಿಗೆ,
ತೂಗಾಡುವ ಗೂಡು,
ಮಳೆ,ಗಾಳಿಗೆ ಬೀಳದ, ಜಗ್ಗದ,
ಮಜಬೂತಾದ ಗೂಡು.
ಹೊಸ ಸಂಸಾರಕೆ ಮೊದಲ ಹೆಜ್ಜೆ,
ಅವಿರತ ಶ್ರಮದ ಕಾಯಕ ಯೋಗಿ.
ಜಗದ ಕಂಗಳಲ್ಲಿ ಕಾಯಕ ಶಿಲ್ಪಿ,
ಪ್ರಕೃತಿಯ ಅಚ್ಚರಿಯೇ ಈ ಪುಟ್ಟ
ಹಕ್ಕಿ.
ಗೂಡು ಹೆಣೆಯುವುದು ಗೀಜಗ,
ಶ್ರದ್ಧೆ,ಆಸಕ್ತಿ ಮೆಚ್ಚುವುದು
ಮೂರ್ಜಗ.
ಈ ಜಗದ ಮೊದಲ ವಾಸ್ತುಶಿಲ್ಪಿ,
ಆಧ್ಯಾತ್ಮದ ಕಲ್ಪನೆಗೆ ಅರ್ಥಬರೆವ
ಗೀಜಗ
No comments:
Post a Comment