ಆಲದ ಮರದ ಗಾಳಿ ಮೃದುವಾಗಿದೆ,
ಮರದ ಶಾಖೆಗಳು ವಿಸ್ತಾರವಾಗಿ
ಹರಡಿದೆ,
ಬೇರುಗಳು ಗಟ್ಟಿಯಾಗಿ ಮಣ್ಣಲ್ಲಿ
ಇಳಿದಿದೆ,
ಹಕ್ಕಿಗಳ ಚಿಲಿಪಿಲಿ ಗಾನ ಮೊಳಗುತ್ತದೆ,
ಮರದ ಎಲೆಗಳು ಚಿನ್ನದ ಬಣ್ಣದಲ್ಲಿ
ಹೊಳೆಯುತ್ತದೆ.
ಕತ್ತಲಾಗುತ್ತಿದ್ದಂತೆ ಹಕ್ಕಿಗಳು
ಮೌನವಾಗುತ್ತವೆ,
ಎಲೆಗಳು ಮೌನವಾಗಿ ಮಾತನಾಡುತ್ತವೆ,
ತಾರೆಗಳು ಆಗಸದಲ್ಲಿ ನಗುತ್ತವೆ,
ಮೋಡಗಳು ಸಂದೇಶ ತಲುಪಿಸುವ
ನೆವದಿ ತೇಲುತ್ತವೆ,
ಬೆಟ್ಟಗಳ ಸಾಲಿಗೆ ನಿಂತು ಮಳೆ
ಸುರಿಸುತ್ತವೆ,
ಬೆಟ್ಟದ ತೊರೆಗಳು ನಲಿದು ಹರಿಯುತ್ತವೆ,
ಎಲ್ಲೆಡೆ ಜೀವಂತಿಕೆ ನಳನಳಿಸುತ್ತದೆ,
ಜೀವನ ಪ್ರೀತಿ ಗಾಳಿಯಲ್ಲಿ
ಹರಡುತ್ತದೆ.
No comments:
Post a Comment