Saturday, October 25, 2025

ನಾಳೆ

 ನೀರಿನಲ್ಲಿ ಸೂರ್ಯನ ಕಿರಣಗಳು ಕೆಂಪಾಗಿ ತೋರುತ್ತಿತ್ತು,

ನೀರಿನ ಅಲೆಗಳು ಗಾಳಿಯಿಂದ ಚದುರಿತ್ತು,

ತಂಪಾದ ಗಾಳಿ ಸಂಗೀತವ ಹೊಮ್ಮಿಸುತ್ತಿತ್ತು,

ಕತ್ತಲಲ್ಲಿ ಮಿಂಚು ಹುಳು ಮಿಣುಕುತ್ತಿತ್ತು,

ಮಿಂಚು ಹುಳಗಳ ಹಿಡಿಯುವ ಆಸೆ,

ಸಣ್ಣ ಹುಡುಗರು ಅದರ ಹಿಂದೆ ಹಿಂದೆ,

ರಾತ್ರಿ ಹೊರಳಾಡಿದರೂ ಸುಳಿಯದ ನಿದ್ದೆ,

ಕಣ್ಣು ಮುಚ್ಚಿದರೆ ಹೊಸ ಕನಸಿನ ಲೋಕ,

ಮನಸ್ಸು ಬುಲೆಟ್ ಟ್ರೇನಿನಂತೆ ಓಡುತ್ತಿದೆ,

ಸುಂದರ ತಂಪಾದ ಸಮಯದಲ್ಲಿ

ನೋವುಗಳೇಕೆ ಬೆನ್ನು ಹತ್ತುತ್ತವೆ?,

ನೆಮ್ಮದಿಯ ಕಾಣಿಸದೆ - ಭೂತವನ್ನೇ ನಿಲ್ಲಿಸುವುದು,

ಯಾವ ಮಸಲತ್ತು ನನ್ನ ಈ ಕ್ಷಣಗಳ ಕಸಿಯುವುದು,

ಬೇಡ ಬೇಡವೆಂದರೂ ಏಕೆ ಬರುವೆ ನೋವುಗಳೇ?

ನಿದ್ದೆಯಲ್ಲಾದರೂ ನೆಮ್ಮದಿಯ ಕಾಣಲು ಬಿಡಿ.

ಬನ್ನಿ ಎದೆಯ ಹರಡಿ ಬಿತ್ತುವೆ ನಿಮ್ಮನ್ನೇ,

ಹೊಸ ನಾದ ಎದೆಯಲಿ ಹೊಮ್ಮಲಿ,

ಸತ್ತ ನೋವುಗಳ ಗೊಬ್ಬರದಿಂದ ಹೊಸ ಪೈರು ಬೆಳೆಯುವೆ,

ಹೊಸ ದಾರಿಯ ಹುಡುಕುತಾ, ಹೊಸ ಗೀತೆಯ ಹಾಡುವೆ.

ಮತ್ತೆ ನಾಳೆಗೆ ಕಾಯುವೆ ಹೊಸ ಅನುಭವಕ್ಕೆ ಕಾಯುತ್ತಾ.

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...