ಕಷ್ಟ ಸಹಿಸಿ, ನೋವು ಅನುಭವಿಸಿ,
ಪ್ರಾಣ
ಹರಣ, ರುಧಿರ ಹರಿಸಿ,
ಗಳಿಸಿದೆವು ಈ ಅಮೂಲ್ಯ ಸ್ವಾತಂತ್ರ!
ಬೂಟುಗಾಲುಗಳಿಂದ ಒದೆಸಿಕೊಂಡವರೆಷ್ಟೋ?
ಎದೆಯ ಛೇಧಿಸಿದ ಗುಂಡುಗಳೆಷ್ಟೋ?
ನೇಣಿಗೆ
ಒಡ್ಡಿದ ಕೊರಳುಗಳೆಷ್ಟೋ?
ತ್ಯಾಗದಿಂದ ಗಳಿಸಿದೆವು ಈ ಸ್ವಾತಂತ್ರ!
ಭಿಕ್ಷೆಯಾಗಿ ಸಿಕ್ಕಿಲ್ಲವೀ ಸ್ವಾತಂತ್ರ!
ಕಣ್ಣೀರು,
ನೋವು, ಹುತಾತ್ಮರ ತ್ಯಾಗ,
ವೀರ ಯೋಧರ ಸಮಾಧಿಯ ಮೇಲೆ
ಬೆಳೆದೆವು
ನಮ್ಮ ಭವಿಷ್ಯದ ಸ್ವಾತಂತ್ರ!.
ರಾಜಕೀಯ,
ಸ್ವಾರ್ಥ ಸಾಧನೆಯಿಂದ
ನಿಜ ಸ್ವಾತಂತ್ರದ ಹರಣವಾಗಿದೆ.
ಹುತಾತ್ಮರ
ಬಲಿದಾನ ವ್ಯರ್ಥವಾಗಿಸದಿರೋಣ
ಅವರ ತ್ಯಾಗದ ನೆಲೆಯ ಮೇಲೆ
ಅರಳಿಸೋಣ
ಈ ಸ್ವಾತಂತ್ರ್ಯದ ಹೂವು.
ಅವರ ಕನಸುಗಳನ್ನು ಜೀವಿಸೋಣ,
ನಮ್ಮ ನಾಳೆಗಳನ್ನು ಬೆಳಗಿಸೋಣ,
ಉಳಿಸಿಕೊಳ್ಳೋಣ, ಗೌರವಿಸೋಣ
ಸ್ವಾತಂತ್ರ, ಈ ಪವಿತ್ರ ಸ್ವಾತಂತ್ರ.
No comments:
Post a Comment