Saturday, July 18, 2026

ವಿರಾಮ

ರಾತ್ರಿ ಬೆಳಗು ಕಾಣದ ದರ್ಶನಗಳ ಅನಾವರಣ,

ಸಂತೋಷ ಬಿಟ್ಟು ಭ್ರಮೆಯ ಹಿಂದೆ ನಾವು,

ಕನಸ ಕಾಣುತ್ತಲೇ ಜೀವನ ಸವೆಸಿದವರು,

ವಾಸ್ತವವ ಅರಿಯದೆ ಕಣ್ಣೀರಿಡುವವರು.

 

ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದೆ,

ನಡುವೆ ನರಳುವವರು ನಾವು,

ಜೀವನ, ಭ್ರಮೆಯ ನಡುವೆ ನಾವು,

ಆಯ್ಕೆ ಗೊಂದಲ ನರಕ ಯಾತನೆ.

 

ಎಲ್ಲವ ಬಿಟ್ಟು ನಡೆಯಲು ವ್ಯಾಮೋಹ,

ಎಲ್ಲವ ಇಟ್ಟು ನಡೆಯಲು ಸ್ವಾರ್ಥ,

ಎರಡೂ ಇರದೆ  ಬರಿಗೈ ದಾಸರು,

 ಸಾವು, ಬದುಕಿನ ನಡುವೆ ವಿರಾಮ.

No comments:

Post a Comment

ವಿರಾಮ

ರಾತ್ರಿ ಬೆಳಗು ಕಾಣದ ದರ್ಶನಗಳ ಅನಾವರಣ , ಸಂತೋಷ ಬಿಟ್ಟು ಭ್ರಮೆಯ ಹಿಂದೆ ನಾವು , ಕನಸ ಕಾಣುತ್ತಲೇ ಜೀವನ ಸವೆಸಿದವರು , ವಾಸ್ತವವ ಅರಿಯದೆ ಕಣ್ಣೀರಿಡುವವರು...