ನೂರು ಕನಸುಗಳು
ಮನದ ತುಂಬೆಲ್ಲಾ ಮನೆ ಮಾಡಿದೆ\
ನೂರು ಮಾತುಗಳು
ಗುರಿಯ ಕಡೆಗೆ ಹೋಗದಂತೆ ತಡೆದಿದೆ\\
ಕಣ್ಣು ಮುಚ್ಚಿದರೆ
ಹೊಸ ನವಿರಾದ ಅಂಕಣದ ಅನಾವರಣ\
ಬಣ್ಣ ಬಣ್ಣದ ಚಿತ್ತಾರ
ಚೈತನ್ಯದ ಚಿಲುಮೆಯಾಗಿ ಆರೋಹಣ\\
ಬೆನ್ನು ತಟ್ಟಿ ಮುಂದೆ ಹೋಗೆಂದು
ತನ್ನವರು ಬೆಂಬಲಿಸಿ ಹಾರೈಸುವರು\
ಬೆನ್ನ ಹಿಂದೆ ನೂರು ಚುಚ್ಚುಮಾತು
ಗುರಿಯಿಂದ ವಿಚಲಿತನಾಗುವಂತೆ ಮಾಡುವರು\\
ಮನದಲೆಲ್ಲಾ ತೊಳಲಾಟ
ಅವರಲ್ಲೊ ನನ್ನ ಕಂಡು ವಿಕಟಹಾಸ
ಬಳಲಿ ಬೆಂಡಾಗಿ ಸೊರಗಿರುವೇನು
ಮಾತಿಗೆ ಆಹಾರವಾಗಿ ಬಲಿಯಾಗಿರುವೆನು\\
No comments:
Post a Comment