ಎದ್ದು ಹೊರಟು ಹೋದ ಅವನು
ಮತ್ತೆ ಬರಲಾಗದ ಕಡೆಗೆ ಹೇಳದೆ\\
ಕಣ್ಣುಗಳು ಹೊಳೆಯುತ್ತಿದ್ದವು ನಕ್ಷತ್ರದಂತೆ
ತಿಮಿರಾಂಡವ ಕಳೆದ ರವಿತೇಜದಂತೆ\
ಬಂದ ಮಾನವೀಯ ಸೇವಕನಾಗಿ ಸೇವೆಗೈದ
ಕೆಲಸ ಮುಗಿದ ಮೇಲೆ ಹೇಳದೆ ಮರೆಯಾದ\\
ತಾನು ಬಂದ ಕೆಲಸ ಮುಗಿಯಿತೆಂದು
ಭುವಿಯ ಋಣವ ತೀರಿಸಿ ನಿಂದು\
ಹಾಡುತ್ತಾ ಪಾಡುತ್ತಾ ನಗುನಗುತ್ತಾ ಬಂದು
ಏಕಾಗ್ರಚಿತ್ತದಿಂದ ಬಸವಳಿದು ಬೆಂದು\\
ನಿಂದನೆ ಹೊಗಳಿಕೆ ಸಮಭಾವದಿ ಕಂಡು
ನೋವು ನಲಿವುಗಳ ಸಮರಸದ ಭಾವಕೆ\
ಜೀವನದ ಪಲ್ಲವಿಯ ರಾಗಕೆ ಮುನ್ನುಡಿ ಬರೆದು
ಸಾಗುತ ಸಾಗುತ ನೆಗೆದ ಆಕಾಶಕೆ\\
No comments:
Post a Comment