ಇದೆ ಕೊನೆಯೆಂದು
ಇತ್ತೇ ಪೂರ್ಣ ಬಿಂದು\
ಅದು ಕೊನೆಯಾಗಲಿಲ್ಲ
ಮುನ್ನುಡಿಯಾಯಿತು ಹೊಸ ಪುಟಕ್ಕೆ\\
ಸಾಲು ಸಾಲು ಅಕ್ಷರದ ಪದಗಳು
ಒಂದೂ ಆಗಲಿಲ್ಲ ಕವಿತೆ\
ಅವಳ ಮನದ ನೋವು ಅರ್ಥವಾಗಲಿಲ್ಲ
ನನ್ನ ಭಾವ ಆಗುವುದೇ ಭಾವಗೀತೆ\\
ನೂರು ನೂರು ಪುಟಗಳು
ಭಾವವಿರದ ಕಂತೆಯಂತೆ\
ಜೀವವಿಲ್ಲದ ಹೊತ್ತಿಗೆಯಲ್ಲಿ
ಸತ್ತ ಹೆಣವ ಶೃಂಗರಿಸಿದಂತೆ\\
ಯಾರ ಹೃದಯವನ್ನೂ ತಟ್ಟಲಿಲ್ಲ
ಎನ್ನೆದೆಯನ್ನು ತಣಿಸಲಿಲ್ಲ\
ಭಾವವಿರದ ಹಾಡು ಎಷ್ಟು ಹಾಡಿದರೂ
ಮನದ ಭಾರ ಹೆಚ್ಚುವುದಂತೆ\\
No comments:
Post a Comment