ಭಾವನೆಗಳು ಎದೆಯೊಳಗೆ ಬೀಸಿದರೆ
ನೋವು ಕಣ್ಣೀರಾಗಿ ಹರಿಯುವುದು\
ಮೌನದ ತಂಗಾಳಿ ಮನದೊಳಗೆ ಸಿಲುಕಿರಲು
ಹೃದಯದ ಮಾತು ಕವಿತೆಯಾಗಿ ಅರಳುವುದು\\
ಒಂದೊಂದು ಕ್ಷಣವೂ ಹೋರಾಟ ನಮಗಿಲ್ಲಿ
ಯೋಚನೆಗಳ ಹುಟ್ಟು-ಸಾವುಗಳ ಪರದಾಟ ಮನದಲ್ಲಿ\
ಯೋಚನೆಗಳು ಕಾರ್ಯಾರಂಭ ಮಾಡುವ ಮೊದಲೇ ಮರಣ
ಮನದಲ್ಲಿ ನೂರು ಕದನ; ಮನದಿಂದ ಶಾಂತಿಯ ಹರಣ\\
ಎಲ್ಲಿ ಅಲೆಯಲಿ ಹೇಳು! ನಾನಿಲ್ಲಿ ಏಕಾಂಗಿ
ಅತ್ತರೂ ಕಣ್ಣೀರೋರೆಸುವವರು ಇಲ್ಲಿಲ್ಲ ಪರಿತ್ಯಾಗಿ \
ಸಂತೋಷ ಹಂಚೋಣವೆಂದರೆ ಎಲ್ಲರಿಗೂ ಆತಂಕ
ಏಕೆ ಬದಲಾದ? ಏನೋ ನಡೆದಿದೆ ಮಸಲತ್ತು ಬಿಂಕ\\
ನನ್ನೊಳಗೆ ನೂರು ಯೋಧರ ಹೋರಾಟ ನಡೆದಿದೆ
ಕಣ್ಣು ಮುಚ್ಚಿ ಕುಳಿತಿರಲು ಮನದಲ್ಲಿ ಗಾಯದ ನೋವು ಹೆಚ್ಚಿದೆ\\
ನಿನ್ನ ಸಮಸ್ಯೆಗೆ ನೀನೇ ಉತ್ತರವಾಗು
ಛಲದಿಂದ ಎದುರಿಸಿ ಎಲ್ಲರಿಗಿಂತ ಎತ್ತರವಾಗು\\
No comments:
Post a Comment