- ತೆರೆಯದ ಬಾಗಿಲು -

ಲೋಕಕ್ಕೆ ನೂರು ಬಾಗಿಲುಗಳು
ಅಂಧಕಾರವ ಓಡಿಸಲು\
ಸೂರ್ಯನೋಬ್ಬನೆ ಸಾಕಲ್ಲವೇ
ಲೋಕದ ಕತ್ತಲು ಓಡಿಸಲು\\

ಮನಸ್ಸಿಗೆ ಒಂದೇ ಬಾಗಿಲು
ತೆರೆಯುವುದಿಲ್ಲ ಸುಮ್ಮನೆ\
ಬಣ್ಣ ಬಣ್ಣದ ತೊಗಲು
ಬಾಯಿ ಬಿಡುವರು ಬೊಮ್ಮನೇ\\

ಮನಸ್ಸಿಗೆ ಬೇಸರ
ಬೇಕಿದೆ ಚೈತನ್ಯದ ಹೊನಲು\
ಬೇಕು ಗುರುವಿನ ಆಸರೆ
ಕಾಣಲಿಲ್ಲ ತೆರೆದ ಬಾಗಿಲು\\

ಮನಸು ಕಾದಿದೆ
ಒಲವ ಗುರುವಿನ ಹಾರೈಕೆಗೆ\
ನೂರು ಗುರುಗಳು ಲೋಕದಲ್ಲಿ
ಯಾರ ಹೃದಯದ ಬಾಗಿಲು ತೆರೆಯಲಿಲ್ಲ ನನಗಾಗಿ\\

- ದುಗುಡ -

ಇದೆ ಕೊನೆಯೆಂದು
ಇತ್ತೇ ಪೂರ್ಣ ಬಿಂದು\
ಅದು ಕೊನೆಯಾಗಲಿಲ್ಲ
ಮುನ್ನುಡಿಯಾಯಿತು ಹೊಸ ಪುಟಕ್ಕೆ\\

ಸಾಲು ಸಾಲು ಅಕ್ಷರದ ಪದಗಳು
ಒಂದೂ ಆಗಲಿಲ್ಲ ಕವಿತೆ\
ಅವಳ ಮನದ ನೋವು ಅರ್ಥವಾಗಲಿಲ್ಲ
ನನ್ನ ಭಾವ ಆಗುವುದೇ ಭಾವಗೀತೆ\\

ನೂರು ನೂರು ಪುಟಗಳು
ಭಾವವಿರದ ಕಂತೆಯಂತೆ\
ಜೀವವಿಲ್ಲದ ಹೊತ್ತಿಗೆಯಲ್ಲಿ
ಸತ್ತ ಹೆಣವ ಶೃಂಗರಿಸಿದಂತೆ\\

ಯಾರ ಹೃದಯವನ್ನೂ ತಟ್ಟಲಿಲ್ಲ
ಎನ್ನೆದೆಯನ್ನು ತಣಿಸಲಿಲ್ಲ\
ಭಾವವಿರದ ಹಾಡು ಎಷ್ಟು ಹಾಡಿದರೂ
ಮನದ ಭಾರ ಹೆಚ್ಚುವುದಂತೆ\\

- ಬಿನ್ನಹ -

ನಿನ್ನ ಕಣ್ಣ ನೋಟದಿಂದ
ಎನ್ನೆದೆಯ ಕಡಲಿನಲಿ
ಪ್ರೇಮಧಾರೆ ಉಕ್ಕುತಿದೆ
ನೊರೆನೊರೆದುಹೊರಹೊಮ್ಮುತಿದೆ ಇಂದು\\

ಪ್ರತಿ ದಿನವು ನಿನ್ನ ದರುಶನ
ತಪ್ಪದೆ ಆಗುವುದು ಕನಸಿನಲಿ\
ನಿನ್ನ ಹುಸಿ ಕೋಪ
ಎನ್ನೆದೆಯ ಪ್ರೀತಿಯನು ಆವಿಯಾಗಿಸುತಿದೆ ಇಂದು\\

ನಿನ್ನ ಪ್ರೇಮದ ಪರಿಯ
ತಿಳಿಯುವುದು ಬಲು ವಿಷಮ\
ಹೇಳಲು ಬಾಯಿಲ್ಲ
ಧೈರ್ಯ ಬಾರದು ಇಂದೇಕೋ\\

ಆಗುವುದು ಆಗಲಿ ಎಂದು
ಇಂದು ನಿನ್ನ ಮುಂದೆ ನಿಂತಿರುವೆ\
ನಿನ್ನ ಕಣ್ಣ ನೋಟದಲ್ಲೇ ಸೋತಿರುವೆ
ಹೃದಯದ ಭಾವನೆ ಕರಗಿ ನೀರಾಗುತಿದೆ\\

- ಕಳ್ಳ ನೆನಪು -

ಏಕೆ ನೆನಪಾಗುತಿಹೆ?
ಬೇಡದ ಸಮಯದಲ್ಲಿ
ಇಂದೇಕೆ ನೆನಪಾಗುತಿಹೆ ನೀನು?

ಬೇಡವೆಂದು ಬಿಟ್ಟು ಹೋದವಳು ನೀನು
ಹೃದಯ ಅರಳಿಸಿ ಬಾ ಎಂದು ಬೇಡಿಕೊಂಡವ ನಾ\
ಪ್ರೀತಿಯ ಹೂವನು ಹೊಸಕಿ ಹಾಕಿ ಹೋದೆ ನೀನು
ಹೃದಯ ಗಾಯವಿನ್ನೂ ಮಾಸಿಲ್ಲ ಆಗಲೇ ನೆನಪಾಗುತಿಹೆ\\

ಹೊಸ ಚಿಗುರು ಬರುತಿರಲು
ಬಿರುಗಾಳಿಯಂತೆ ಬರುತಿದೆ ನಿನ್ನ ನೆನಪು\
ಮುರಿದ ರೆಕ್ಕೆಯ ಹಕ್ಕಿಯು ನಾನು
ಕಳ್ಳ ಬೆಕ್ಕಿನಂತೆ ಪ್ರಾಣ ಹಿಂಡುತಿದೆ ನಿನ್ನ ನೆನಪು\\

ಮುರಿದ ಮನಕೆ ಆಸರೆ ಬೇಕು
ನಿನ್ನ ನೆನಪುಗಳ ಸರಳುಗಳ ನಡುವೆ ನಡೆದಿದೆ ನಿಲ್ಲದ ಕಧನ\
ಯಾರ ಕೈ ಮೇಲಾಗುವುದೋ
ಮನ-ಭಾವಗಳೊಂದಿಗೆ ನಡೆದಿದೆ ಮಂಥನ\\

-ಬಯಕೆಯ ಹೆದ್ದಾರಿ-

ಕಂಡ ಕನಸು ನನಸಾಗುವುದೇ?
ಕನಸೇ ದೂರ ಹೋಗದಿರು
ನಿನ್ನನ್ನೇ ಆರಾಧಿಸುವೆ
ನಿನ್ನನ್ನೇ ಪ್ರಾರ್ಥಿಸುವೆ\\

ಕಣ್ಣು ಮುಚ್ಚಿದರೆ ಎದೆಯೊಳಗೆ
ಜ್ವಾಲಾಗ್ನಿಯಂತೆ
ನಿದ್ದೆ ಮಾಡಗೊಡದೆ ಎಚ್ಚರಿಸುವೆ
ಅಗಾಧ ಕತ್ತಲಲ್ಲಿ ಎತ್ತ ಹೋಗಲಿ ಹೇಳು\\

ನಿಂತಲ್ಲೂ ನೀನೆ
ಕುಳಿತಲ್ಲೂ ನೀನೆ
ನೀನೆ ನಾನಾಗಿರುವೆ
ನೀನು ನಾನಾಗಬೇಕೆಂಬ ಹಂಬಲ ಹೆಮ್ಮರವಾಗಿದೆ\\

ನಿದ್ದೆ ಕೆಡಬೇಕು
ಗುರಿಯ ಕಡೆಗೆ ಎದೆಗುಂಧದೆ ಸಾಗಬೇಕು
ನಾ ನಿಂತರೂನೀನು ನಿಲ್ಲಗೊಡೋಡಿಲ್ಲ
ಕಂಡ ಕನಸೇ ನನಸಾಗು ಬಾ
ಬಯಕೆಯ ಹೆದ್ದಾರಿಯಲಿ ನಿನಗಾಗಿ
ಬರುತಿರುವೆ ನಾ....





-ಜೀವ ನದಿ -

ರಭಸದಿಂ ಧುಮಿಕ್ಕಿ
ಹರಿಯುತಿರುವ ನೀರೆ ನೀ ಯಾರು?
ಸೌಮ್ಯವನೆ ಕಳಚಿಕೊಂಡು
ಕ್ರೋಧವನೆ ಮೈತಳೆದು
ಭೋರ್ಗರೆಯುವ ನೀರೆ ನೀ ಯಾರು?\\

ಎಲ್ಲಿ ನಿನ್ನ ಹುಟ್ಟು?
ಎತ್ತ ನಿನ್ನ ಪಯಣ?
ಎಲ್ಲರ ಕೊಳೆ ತೊಳೆದು
ಮಲಿನತೆಯ ಅರಿವೇ ತೊಟ್ಟು
ಎತ್ತ ಹೊರೆಟಿರುವೆ ನೀರೆ ನೀನು?\\

ಗಿರಿ-ಕಂದರಗಳಲ್ಲಿ ಹರಿಯುವುದಿಲ್ಲ
ಸಸ್ಯ ಶಾಮಲೆಯ ಸೊಂಕಿಲ್ಲ ನಿನಗೆ
ಸುವಾಸನೆಯ ಬೀರುವುದಿಲ್ಲ
ಪೂಜನೀಯ ಗೌರವವಿಲ್ಲ ನಿನಗೆ\\

ಪಾವನೆ ಗಂಗೆ ಸೇರುವ ತವಕ
ಅದಕ್ಕೆ ಮರು ಮಾತಿಲ್ಲದ ಪಯಣ
ನಿನ್ನ ಕಣ್ಣೀರು ಒರೆಸುವವರಿಲ್ಲ
ಕಸ ಕಡ್ಡಿ ದುರ್ಗಂಧ ಹೋಗುತಿದೆ ಪ್ರಾಣ\\

-ಜೀವ ನದಿ -

ನಿನ್ನಲ್ಲಿಯು ತುಂಬಿಹುದು ಶಕ್ತಿ
ಅರಿಯಲು ಬೇಕಾಗಿದೆ ಯುಕ್ತಿ\
ಸುಮ್ಮನೆ ಹೊರಟಿರುವೆ ಬರಿಗೈಲಿ
ಕಣ್ಣಿದ್ದೂ ಕುರುದರಾಗಿರುವವರು ಬಹಳ ಇಲ್ಲಿ\\

ನಿನ್ನ ಈ ಸ್ಥಿತಿಗೆ ಕಾರಣರು ನಾವೇ
ಸುಮ್ಮನೆ ಕುಳಿತಿರುವೆವು ಕೈಕಟ್ಟಿ\
ಧೋಷಪೂರಿತಳೆಂದು ನಿನ್ನ ಮರೆತಿರುವೆವು ನಾವು
ಕೈಲಾಗದವರೆಂದು ಕಟ್ಟಿಕೊಂಡಿಹೆವು ಹಣೆಪಟ್ಟಿ\\

ಮಾತಿಲ್ಲ ಕತೆಯಿಲ್ಲ ಕಣ್ಣೀರನು ಸುರಿಸಿ
ಸುಮ್ಮನೆ ಹರಿಯುತಿರುವೆ ನೀನಿಲ್ಲಿ\
ಏನು ಮಾಡಲಾಗದ ಸ್ಥಿತಿಯಿಲ್ಲಿ ಅಸಹ್ಯವೆಂದು
ಸುಮ್ಮನೇ ಕುಲಿತಿರುವೆವು ನಾವಿಲ್ಲಿ\\

ನಿನ್ನ ಗುರಿಯನು ನೀ ಮುಟ್ಟುವೆ
ನಾವಿಲ್ಲಿ ಸೊರಗಿರುವೆವು ನೀನಿಲ್ಲದೆ\
ಮತ್ತೆ ಅದೇ ಚಿಂತೆ ಸಮ್ಮನೆ ನೀ ಹರಿಯುತಿರುವೆ
ಮಾಲಿನ್ಯದ ವಿಷವ ತುಂಬಿರುವೆವು ಚಿಂತೆಯಿಲ್ಲದೆ\

- ಹುಟ್ಟು -

ಭಾವನೆಗಳು ಎದೆಯೊಳಗೆ ಬೀಸಿದರೆ
ನೋವು ಕಣ್ಣೀರಾಗಿ ಹರಿಯುವುದು\
ಮೌನದ ತಂಗಾಳಿ ಮನದೊಳಗೆ ಸಿಲುಕಿರಲು
ಹೃದಯದ ಮಾತು ಕವಿತೆಯಾಗಿ ಅರಳುವುದು\\

ಒಂದೊಂದು ಕ್ಷಣವೂ ಹೋರಾಟ ನಮಗಿಲ್ಲಿ
ಯೋಚನೆಗಳ ಹುಟ್ಟು-ಸಾವುಗಳ ಪರದಾಟ ಮನದಲ್ಲಿ\
ಯೋಚನೆಗಳು ಕಾರ್ಯಾರಂಭ ಮಾಡುವ ಮೊದಲೇ ಮರಣ
ಮನದಲ್ಲಿ ನೂರು ಕದನ; ಮನದಿಂದ ಶಾಂತಿಯ ಹರಣ\\

ಎಲ್ಲಿ ಅಲೆಯಲಿ ಹೇಳು! ನಾನಿಲ್ಲಿ ಏಕಾಂಗಿ
ಅತ್ತರೂ ಕಣ್ಣೀರೋರೆಸುವವರು ಇಲ್ಲಿಲ್ಲ ಪರಿತ್ಯಾಗಿ \
ಸಂತೋಷ ಹಂಚೋಣವೆಂದರೆ ಎಲ್ಲರಿಗೂ ಆತಂಕ
ಏಕೆ ಬದಲಾದ? ಏನೋ ನಡೆದಿದೆ ಮಸಲತ್ತು ಬಿಂಕ\\

ನನ್ನೊಳಗೆ ನೂರು ಯೋಧರ ಹೋರಾಟ ನಡೆದಿದೆ
ಕಣ್ಣು ಮುಚ್ಚಿ ಕುಳಿತಿರಲು ಮನದಲ್ಲಿ ಗಾಯದ ನೋವು ಹೆಚ್ಚಿದೆ\\
ನಿನ್ನ ಸಮಸ್ಯೆಗೆ ನೀನೇ ಉತ್ತರವಾಗು
ಛಲದಿಂದ ಎದುರಿಸಿ ಎಲ್ಲರಿಗಿಂತ ಎತ್ತರವಾಗು\\

-ಚಂದ್ರ ಕದನ -

-ಗಡಿಯಾರ ನಿಂತಿದೆ -

ಅರೆ! ಗಡಿಯಾರ ನಿಂತಿದೆಏಕೆ ನಿಂತಿತೋ?
ಕಾರಣಗಳ ಹುಡುಕಾಟ ನಿಲ್ಲದೆ ನಡೆದಿದೆ\\

ಒಂದು ಆರಂಭ
ಒಂದು ಕೊನೆ
ಜೀವನದ ನಿಯಮ
ಅದಕ್ಕೆ ಎಲ್ಲರು ಬದ್ಧ\\

ನಮ್ಮೊಳಗೂ ನೂರು ಗಡಿಯಾರಗಳಿವೆ
ಉಸುರಿನ ಗಡಿಯಾರ
ಚಿಂತೆ-ಯೋಚನೆಗಳ ಗಡಿಯಾರ
ಪ್ರೀತಿ-ಪ್ರೇಮ ದ್ವೇಷ ಮತ್ಸರದ ಗಡಿಯಾರ
ಒಂದು ಸೀಮಿತ ಗಡಿಯೊಳ ಸಂಚಾರ
ಎಲ್ಲಕ್ಕೂ ಒಂದು ದಿನ ಅಂತಿಮವೆನ್ಬುದಿದೆ
ಕಾಲನ ಗಡಿಯಾರ ಮಾತ್ರ ನಿರಂತರ
ಅವನು ಮಾತ್ರವೇ ಚಲನಶೀಲ
ಆದರೆ ನಮ್ಮ ಗಡಿಯಾರ ನಿಲ್ಲುತ್ತದೆ
ಮತ್ತೆ ನಡೆಯದೆ ನಿಂತೇ ಬಿಡುತ್ತದೆ

-ಶಕ್ತಿಯ ರೂಪ-

ಓ ನನ್ನ ತಂದೆಯೇ ನೀನು ಎಲ್ಲಿರುವೆ?
ನಾನೊಂದು ಪುಟ್ಟ ಧೂಳಿನ ಕನವೆನ್ನಲೇ?
ನಾನೆಷ್ಟು ಚಿಕ್ಕವನ್ನೆಂದರೆ ಅನುವಿನಲಿ ಶತಕೋಟಿ ಭಾಗಗಳಲ್ಲಿ ಒಂದು ನಾನು
ವಿಶ್ವದ ಚೇತನ ನೀನು
ನಿರಂತರ ಜನ್ಗಮನೆನ್ನಲೇ?
ನನ್ನೊಳಗಿನ ಚೇತನವು ನೀನೆ
ನನ್ನೊಳಗಿನ ಜಡವೂ ನೀನೆ
ನನ್ನ ಶಕ್ತಿಯೆಂದರೆ ನನ್ನ ಜಡತ್ವದ ಬೆಳಕಿನ ದ್ವಿಗುಣ ವೇಗದ ಗುಣಾತ್ಮ ನಾನು (E=mc2)
ಶಕ್ತಿ ಎಂದರೆ ಬೆಳಕಿನ ವೇಗ ಮೀರಿಸುವ ಮನಸ್ಸಿನ ಚಲನಶೀಲತೆ ಎನ್ನಲೇ?
ವಿಜ್ಞಾನವೋ! ಪರಿಜ್ನಾನವೋ! ಅಜ್ನಾನವೋ! ನನ್ನ ಪರಿಧಿಯ ಮೀರಲಾಗದ ಅಸಹಾಯಕನೆನ್ನಲೋ?
ವಿರಾಡ್ ರೋಪದ, ಸರ್ವವ್ಯಾಪ್ತ,
ಕಣ್ಣು ಕಾಣದ ಗಾವಿಲರಾಗಿಹೆವು ನಾವು
ನಿನ್ನನ್ನು ಅರ್ಥಮಾಡಿ ಕೊಳ್ಳಲಾಗದೆ


-ಪ್ರವಾದಿ-

ಎದ್ದು ಹೊರಟು ಹೋದ ಅವನು
ಮತ್ತೆ ಬರಲಾಗದ ಕಡೆಗೆ ಹೇಳದೆ\\

ಕಣ್ಣುಗಳು ಹೊಳೆಯುತ್ತಿದ್ದವು ನಕ್ಷತ್ರದಂತೆ
ತಿಮಿರಾಂಡವ ಕಳೆದ ರವಿತೇಜದಂತೆ\
ಬಂದ ಮಾನವೀಯ ಸೇವಕನಾಗಿ ಸೇವೆಗೈದ
ಕೆಲಸ ಮುಗಿದ ಮೇಲೆ ಹೇಳದೆ ಮರೆಯಾದ\\

ತಾನು ಬಂದ ಕೆಲಸ ಮುಗಿಯಿತೆಂದು
ಭುವಿಯ ಋಣವ ತೀರಿಸಿ ನಿಂದು\
ಹಾಡುತ್ತಾ ಪಾಡುತ್ತಾ ನಗುನಗುತ್ತಾ ಬಂದು
ಏಕಾಗ್ರಚಿತ್ತದಿಂದ ಬಸವಳಿದು ಬೆಂದು\\

ನಿಂದನೆ ಹೊಗಳಿಕೆ ಸಮಭಾವದಿ ಕಂಡು
ನೋವು ನಲಿವುಗಳ ಸಮರಸದ ಭಾವಕೆ\
ಜೀವನದ ಪಲ್ಲವಿಯ ರಾಗಕೆ ಮುನ್ನುಡಿ ಬರೆದು
ಸಾಗುತ ಸಾಗುತ ನೆಗೆದ ಆಕಾಶಕೆ\\



-ಚಿಗುರು-

ಬಯಕೆ ಬಸಿದು ಹೊಸೆದ ಕನಸು ನನಸಾಗುವುದೇ?
ಇರುಳು ಕಂಡ ಕನಸಿನಂತೆ ಜಾರಿಹೊಗುವುದೇ?\\

ಕಳೆದು ಹೋದ ದಿನಗಳು
ಮತ್ತೆ ಮತ್ತೆ ಮನವ ಕೆದಕಿದೆ\
ಏಳದಂತೆ ಮನದ ತುಂಬಾ
ಮಾಸದ ಗಾಯವ ಮಾಡಿಹೋಗಿದೆ\\

ಕಳೆದು ಹೋದುದಕೆ ಚಿಂತೆಯಿಲ್ಲ
ಮುಂದಿನ ದಾರಿ ಸ್ಪಷ್ಟವಾಗಿದೆ\
ಜೊತೆಗೆ ನಿಂತು ಕೈಹಿಡಿದು
ಮುಂದೆ ನಡೆಸುವೆ ಎಂಬ ಆಸೆ ಮಾತ್ರ ಚಿಗುರಿದೆ\\

-ಚಿಂತೆ-

ಉರಿವ ಬಿಸಿಲಿನಲ್ಲೂ
ಅವಕಾಶದ ಹೆಜ್ಜೆಯಿದೆ\\

ಕಗ್ಗತಲಿನ ಇರುಳಿಗೂ
ಬೆಳಕಿನ ಕಾತರತೆಯಿದೆ\\

ಬರಡಾದ ಈ ಹೃದಯಕ್ಕೆ
ನಿನ್ನ ಪ್ರೀತಿಯ ಬಯಕೆಯಿದೆ\\

ತಿರುಗುವ ಭೂಮಿಗೂ
ನಿರಂತರ ಬದಲಾವಣೆಯಿದೆ\\

ನಾಳೆ ಬರುವುದು ಖಚಿತ
ಇಂದು ಒಡೆದ ಕನ್ನಡಿಯಾಗಿದೆ ಬದುಕು\\

ಇಂದೇ ಅನುಭವಿಸುವ ಯೋಚನೆಯಿಲ್ಲ
ನಾಳೆಗೆ ಮಾತ್ರ ಯಾಚನೆ ನೂರಾರು ಏಕೋ?\\

-ಕತ್ತಲೆಂದರೆ-

ಅಮ್ಮ ನಿನಗೆ ಗೊತ್ತು
ಕತ್ತಲೆಂದರೆ ನನಗೆ ಭಯವೆಂದು\
ಆದರೂ ನನ್ನನ್ನು ಬಿಟ್ಟು
ದೂರ ಏಕೆ ಹೋದೆ ಅಮ್ಮಾ?\\

ಶಾಲೆಯಲ್ಲಿ ಎಲ್ಲರೂ ರೇಗಿಸುವರು ಸೋಮಾರಿಯೆಂದು
ನಿನಗೆ ಮಾತ್ರ ಗೊತ್ತಿದೆ ನಾನು ಏನೆಂದು?\\

ಗಣಿತ ವಿಜ್ಞಾನ ಸಮಾಜ ಯಾವುದೂ ನನಗೆ ಅರ್ಥವಾಗುತ್ತಿಲ್ಲ
ನಿನ್ನ ಧ್ಯಾನ ,ನಿನ್ನ ಪ್ರೀತಿ ಬಿಟ್ಟು ಅಮ್ಮ ನನಗೆ ಏನೂ ಗೊತ್ತಿಲ್ಲ \\

ನಿನ್ನ ಅಪ್ಪುಗೆಯಲ್ಲಿ , ಪ್ರೀತಿಯ ಸಿಹಿ ಮುತ್ತಲ್ಲಿ
ಮತ್ತೆ ಮತ್ತೆ ನನ್ನಲ್ಲಿ ನಾನೇ ಹುಡುಕುತ್ತಿದ್ದೇನೆ ಅಮ್ಮ\\

ನಾಲ್ಕು ಗೋಡೆಯ ಮಧ್ಯೆ ಇಂದು ಒಂಟಿಯಾಗಿರುವೆ
ನಿನ್ನ ನೆನಪು ಬಹಳ ಕಾದಿದೆ
ಹೊರಗಡೆ ಗುಡುಗು, ಮಳೆ
ಕತ್ತಲೆಂದರೆ ಭಯ ನಿನಗೆ ಗೊತ್ತಿಲ್ಲವೇನಮ್ಮ?\\

ಮುದುಡಿ ಮಲಗಿದ್ದೇನೆ
ಒಂದೊಂದು ಗುಡಿಗಿಗೂ ಎದೆಜಲ್ಲೆಂದು ಅತ್ತು ಸೊರಗಿದ್ದೇನೆ
ನಿನ್ನ ಪ್ರೀತಿಗೆ ಕಾಯುತ್ತಿದ್ದೇನೆ
ನಿನ್ನ ಅಪ್ಪುಗೆಯಲ್ಲಿ ಪ್ರಪಂಚವನ್ನು ಮರೆತು ಮಲಗಬೇಕೆನ್ದಿದ್ದೇನೆ
ನೀನಿಲ್ಲದೆ ನಾನು ಇಲ್ಲಿ ಹೇಗಿರಲಮ್ಮ?\\

ಕತ್ತಲೆಂದರೆ ನನಗೆ ಭಯ ನಿನಗೆ ಗೊತ್ತಮ್ಮ
ಇಂದು ಸುತ್ತಲೂ kattalu kavidide
nanna Bhaya Odisu baamma
nanage dhayrya hELu baamma\\

ಮೌನ

ಮೌನವೆಂದರೇನು?
ಬಾಯಿಮುಚ್ಚಿ ಕೊಂಡಿದ್ದರೆ ಮೌನವೇ?
ಮನದೊಳಗೆ ಮುಗಿಯದ ಕದನ
ಅಗ್ನಿ ಪರ್ವತದೊಳಗೆ
ಬೆಂಕಿ ಆರುವುದೆಂತು?
ಲಾವಾರಸ ಹೊರಬಂದರೆನೇ ಸಮಾಧಾನವೇ?
ಅಗ್ನಿ ಜ್ವಾಲೆಯ ಕೆನ್ನಾಲಗೆಗೆ ಬಾಯಾರಿಕೆ, ಬೇಕಲ್ಲವೇ ಆಹುತಿ?

ಮೌನವೆಂದರೆ...
ಅಕ್ಷರಗಳಿಲ್ಲದ ಮಾತುಗಳು..
ಸೌರಮಂಡಲದಲ್ಲಿ ಬೆಳಕಿಲ್ಲದ ಜಾಗವಿದ್ದಂತೆ..
ಶಬ್ದಾತೀತ , ಭಾಷಾತೀತ ಮನಸಿಗೆ ನಿಲುಕದ್ದು..
ಕಾಲಕ್ಕೆ ಎಟುಕದ್ದು..
ಮೌನ ನೀರವತೆ ..
ಶಾಂತತೆಯ ಮಹಾಸಾಗರವಿದಂತೆ ..
ಸಪ್ತಸ್ವರಗಳ ಲಾಲಿತ್ಯದಲ್ಲಿ..
....
....
....

- ಚುಚ್ಚು ಮಾತು -

ನೂರು ಕನಸುಗಳು
ಮನದ ತುಂಬೆಲ್ಲಾ ಮನೆ ಮಾಡಿದೆ\
ನೂರು ಮಾತುಗಳು
ಗುರಿಯ ಕಡೆಗೆ ಹೋಗದಂತೆ ತಡೆದಿದೆ\\

ಕಣ್ಣು ಮುಚ್ಚಿದರೆ
ಹೊಸ ನವಿರಾದ ಅಂಕಣದ ಅನಾವರಣ\
ಬಣ್ಣ ಬಣ್ಣದ ಚಿತ್ತಾರ
ಚೈತನ್ಯದ ಚಿಲುಮೆಯಾಗಿ ಆರೋಹಣ\\

ಬೆನ್ನು ತಟ್ಟಿ ಮುಂದೆ ಹೋಗೆಂದು
ತನ್ನವರು ಬೆಂಬಲಿಸಿ ಹಾರೈಸುವರು\
ಬೆನ್ನ ಹಿಂದೆ ನೂರು ಚುಚ್ಚುಮಾತು
ಗುರಿಯಿಂದ ವಿಚಲಿತನಾಗುವಂತೆ ಮಾಡುವರು\\

ಮನದಲೆಲ್ಲಾ ತೊಳಲಾಟ
ಅವರಲ್ಲೊ ನನ್ನ ಕಂಡು ವಿಕಟಹಾಸ
ಬಳಲಿ ಬೆಂಡಾಗಿ ಸೊರಗಿರುವೇನು
ಮಾತಿಗೆ ಆಹಾರವಾಗಿ ಬಲಿಯಾಗಿರುವೆನು\\

-ಮನಸಿನ ತಲ್ಲಣ -

ಸುಮ್ಮನೆ ಕುಳಿತಿಹೆ
ಏನು ಮಾಡಬೇಕೆಂದು ತೋಚದೆ\
ಸುಮ್ಮನೆ ಅಲೆಯುತಿಹೆ
ಗುರಿಯಾವುದೆಂದು ತಿಳಿಯದೆ\\

ಇದು ಮೊದಲಲ್ಲ
ಎಷ್ಟೆಂದು ಬೆರಳ ತುದಿಯಲ್ಲಿದೆ\
ಇದೆ ಕೊನೆಯಲ್ಲ
ನಾಳೆಯು ಬರುವುದಿದೆ\\

ತೆರೆಯ ಮರೆಯಲ್ಲಿ
ಚಿತ್ತಾರದ ಪ್ರಶ್ನೆ ನೂರಿದೆ\
ಮುಗಿಯುವುದೇ ಇಂದಿಲ್ಲಿ
ಎಂಬ ಪ್ರಶ್ನೆ ಮನದಲ್ಲಿ ಕಾಡಿದೆ\\

ಫಲಿತಾಂಶ ಶೂನ್ಯ
ಗೊತ್ತಿರುವ ಉತ್ತರವದು\
ಅಗುವೆನೇ ಮಾನ್ಯ
ಹಗಲುಗನಸಿನ ಆಶಾವಾದವದು\\

-ಮಾತಿಲ್ಲದೆ-

ಹೃದಯವೊಂದು ಮನವ ತಟ್ಟಿತು ಮಾತಿಲ್ಲದೆ
ನಾನೇ ನಿನ್ನ ಜೀವದ ಗೆಳತಿಯೆಂದು
ಸದ್ದಿಲ್ಲದೇ ಹೃದಯ ಕದಡಿತು\\

ತೇಲುವಂತ ಅನುಭವ ಇದೆ ಮೊದಲು
ಯಾವ ಮಾಂತ್ರಿಕತೆ ಅವರಿಸಿತೋ\
ಹೊಸ ಚೈತನ್ಯವೊಂದು ಎದೆಯಲಿ ಹುದುಗಿದೆ
ಯಾವ ಶಕ್ತಿ ಯದೋ ತಿಳಿಯದಾಗಿದೆ\\

ಕಣ್ಣು ಮುಚ್ಚಿದರೆ ತೆರೆದಿದೆ ಲೋಕವೊಂದು
ನೆಲದ ಮೇಲೆ ನಡೆಯುತ್ತಿಲ್ಲ ಈಗೇಕೋ\
ಆ ದಿನದಂದಲೇ ಏನೋ ಒಂದು ರೀತಿ ಹೊಸತನ
ಎಲ್ಲಿತ್ತೋ ಇ ಭಾವ ಇಂದು ತೆರೆಕಂಡಿದೆ\\

ಎಲ್ಲಿಯೂ ಹೋಗದಿರು
ನನ್ನಲ್ಲೇ ನೆಲೆಗೊಳ್ಳು\
ನಿನ್ನ ಭಾವನೆಗಳಿಗೆ
ನೀರೆರೆದು ಪೋಷಿಸುವೆ\\

ನನ್ನ ಎದೆಯ ತೆರೆದಿರುವೆ
ಪ್ರೀತಿಯ ಮೊಳಕೆಯೊಡೆದಿದೆ\
ಎತ್ತರೆತ್ತರಕೆ ಹಾರುವ ಬಯಕೆಯಿದೆ
ಹಕ್ಕಿಯಂತೆ ಹಾರುವ ತವಕವಿದೆ\\

ಬಾ ಮನವೇ ಬಾ
ಹೃದಯವ ತಟ್ಟು ಬಾ\
ಬಾ ಮನವೇ ಬಾ
ಪ್ರೀತಿಯ ಮಲೆಗೆರೆಯೇ ಬಾ\\

ಕಲಾಂ ನಿಮಗೆ ಸಲಾಂ

ಕಲಾಂ ನಿಮಗೆ ಸಲಾಂ \

ಭಾರತದ ಹೆಮ್ಮೆಯ ಪುತ್ರ ಕಲಾಂ

ನಿಮಗೆ ಸಲಾಂ \

ನಿಮ್ಮ ದೇಶ ಭಕ್ತಿಯೇ ಕಲಾಂ

ಭಾರತೀಯರಿಗೆ ಬಲಂ\

ನಮ್ಮ ಕನಸುಗಳೇ ಕಲಾಂ

ಭಾರತೀಯರ ವಲಂ\

ಭಾರತದ ಕ್ಷಿಪಣಿ ಜನಕ ಕಲಾಂ

ಭಾರತದ ಸ್ವಯಂ ರಕ್ಷಣೆಯಲ್ಲಿ ಸರ್ವದಾ ಜಯಂ\

ನೀವು ರಾಷ್ಟ್ರಪತಿಗಳದಿರಿ ಕಲಾಂ

ನಮಗೆಲ್ಲರಿಗೂ ಹೆಚ್ಚಿಸಿತು ಸ್ಥೈರ್ಯಂ\

ಮುಗ್ದಮನಸ್ಸಿನ ಕಲಾಂ

ನಮ್ಮ makkaLi

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...