Saturday, April 4, 2026

ಜನನ–ಮರಣ ತೊಳಲಾಟ

ಅವರ ಭೇಟಿ ಅಪರಿಚಿತರಂತೆ, 

ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ.

ಎರಡು ಅಲೆದಾಡುವ ಆತ್ಮಗಳು,

ಎಂದಿಗೂ ಭೇಟಿಯಾಗುವ  ಉದ್ದೇಶವಿಲ್ಲ.


ಅಗಾಧ ಕಂದಕ ನಡುವಿನ ರಸ್ತೆಯಲ್ಲಿ, 

ಎದುರಿಂದ ಅವನ ವಾಹನ ಗುದ್ದಿತು.

ಪರಿಸರ ಎಂದಿಗೂ ಸೌಮ್ಯವಿರಲಿಲ್ಲ, 

ಹಾರಿದ ರಭಸಕ್ಕೆ ಪ್ರಾಣ ಹಾಂ. 


ಬಿಡುಗಡೆಗೆ ಒಂದು ಕಾರಣ,

ಅಲೆದಾಟ ಮತ್ತೆ ಹೊಸ ಪಾತ್ರ.

ಮತ್ತದೇ ಹೊಸ ಆರಂಭ,

ಜನನ, ಮರಣ ತೊಳಲಾಟ.  

No comments:

Post a Comment

ಹೊಸಬಗೆಯ ಆಗಮನ

ಅದ್ಯಾವುದೋ ದಿವ್ಯ ಮೂರುತಿ, ನನ್ನ ಮನವ ಸೂರೆಗೊಂಡಿದೆ. ಕಣ್ಣ ಮುಂದೆ ಬಂದು ನಲಿಯುತಿದೆ, ಮಾನವ ತೇಲಿಸಿ ನೋವ ಮರೆಸಿದೆ. ಸಂಜೆ ಈಶಾನ್ಯದ ಗಾಳಿ ಬೀಸಿದೆ, ತಂಪ ಸೂಸಿ ಮನವ ಮುದ...