Friday, April 24, 2026

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು,

ಗುರುಗ್ರಹದಷ್ಟು ದೊಡ್ಡದು,

ಒಳ-ಹೊರಗೆ ನಾವೆಲ್ಲರೂ ಒಂದೇ!,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ದೊಡ್ಡಣ್ಣನಂತೆ ಹಣದ ಶ್ರೀಮಂತರು,

ಬಿಕ್ಷುಕನಂತೆ ಅಲೆದಾಡುವ ಬಡವರು,

ನಾವೆಲ್ಲರೂ ಒಂದೇ ಆಗಿಬಿಡುವೆವು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಅವನು ಪರಂಗಿ ಕೆಂಪುಬಣ್ಣ,

ಇವನು ಗೋಧಿಬಣ್ಣ,

ಅವನೋ ಅಮಾವಾಸ್ಯೆ ಕಪ್ಪುಬಣ್ಣ,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಕಣ್ಣು ತೆರೆದಿದ್ದೇವಷ್ಟೇ,

ಒಳಗುರುಡು ಎಲ್ಲರಿಗೂ,

ಅವನು ಬೆಳಕು ಹರಿಸಬೇಕು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.

 

ಪ್ರೇರಣೆ:   No Difference" by Shel Silverstein

No comments:

Post a Comment

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು , ಗುರುಗ್ರಹದಷ್ಟು ದೊಡ್ಡದು , ಒಳ - ಹೊರಗೆ ನಾವೆಲ್ಲರೂ ಒಂದೇ !, ಬೆಳಕು ಹರಿದರೆ ಎಲ್ಲರೂ ಒಂದೇ , ಶೂನ್ಯ . ದೊಡ್ಡಣ್ಣನಂತೆ ಹ...