Friday, April 10, 2026

ಹೇಳು ನೀನು ಯಾರು?

ಬೆಳಗಿನ ನಿಶಬ್ದ, ಮನದಲ್ಲಿ ಬಿರುಗಾಳಿ,

ಕಣ್ಣ ಮುಂದೆ ಅವ್ಯಕ್ತ ಪ್ರಶ್ನೆ.

ಹಣ, ಆಸ್ತಿ, ಹೆಸರು ಏನು ಬೇಕು?,

ನಿನ್ನ ರೂಪವೇನು?, ಹೇಳು ನೀನು ಯಾರು?

 

ಅಸ್ಪಷ್ಟ ದಾರಿ ಬರಿ ಅಲೆದಾಟ,

ಗುರಿ ಇಲ್ಲದ ಬದುಕು ಅಲ್ಲೋಲ ಕಲ್ಲೋಲ.

ಇಟ್ಟ ಹೆಜ್ಜೆಗಳಲ್ಲಿ ದೃಢತೆ ಇಲ್ಲ,

ಮನದಲ್ಲಿ ಅಂಧಕಾರ ಆವರಿಸಿದೆ.

 

ಬರುವ ಕಷ್ಟಗಳಿಗೆ ಕಲ್ಲಾಗು,

ಭಯ, ಬೆದರಿಕೆಗೆ ಸೊಪ್ಪಾಕದಿರು.

ತಿಳಿದುಕೋ ನೀನ್ಯಾರು?, ನೀನ್ಯಾರು?,

ಜಯಿಸಲು ಇಲ್ಲಿರುವೆ ಅರಿವಿರಲಿ.

 

ನಿನ್ನ ನೀ ಅರಿತುಕೋ, ಬೆರೆತು ಕೋ!,

ಅಭ್ಯಾಸ, ಚಿಂತನೆಯ ಬೆಳಕ ಹಚ್ಚು.

ಅಂತರಾತ್ಮವ ಸ್ತುತಿಸಿ, ಎಚ್ಚರಿಸಿಕೋ!,

ಲೋಕಕೆ ನಿನ್ನ ಅವಶ್ಯಕತೆ ಇದೆ ತಿಳಿದುಕೋ!.

No comments:

Post a Comment

ಹೇಳು ನೀನು ಯಾರು?

ಬೆಳಗಿನ ನಿಶಬ್ದ , ಮನದಲ್ಲಿ ಬಿರುಗಾಳಿ , ಕಣ್ಣ ಮುಂದೆ ಅವ್ಯಕ್ತ ಪ್ರಶ್ನೆ . ಹಣ , ಆಸ್ತಿ , ಹೆಸರು ಏನು ಬೇಕು ?, ನಿನ್ನ ರೂಪವೇನು ?, ಹೇಳು ನೀನು ಯಾ...