ಒಳಗಿನ ಕಿಡಿ, ಚಿಕ್ಕದು ಪ್ರಕಾಶಮಾನ,
ಚಿಂತನೆ
ಬಡಿದೆಬ್ಬಿಸಿ, ಕತ್ತಲೆಯ ಓಡಿಸುವುದು.
ಮಣ್ಣಿನ
ಪಾತ್ರೆಯಲ್ಲ, ಬೇಕು,ಬೇಡಗಳ ತುಂಬುವುದಲ್ಲ,
ಅದ್ಭುತ
ಮಾರ್ಗಗಳನ್ನು ತೋರಿಸುವ ದಾರಿದೀಪ.
ಪ್ರತಿ
ಪ್ರಶ್ನೆ ಮೃದುವಾದ ಭಾವನೆಗಳ ಎಬ್ಬಿಸುವುದು,
ಪ್ರತಿ
ಕನಸು ಕಲಿಕೆಯ ಜ್ವಾಲೆಗೆ ಹೆಸರು ನೀಡುವುದು.
ಒಮ್ಮೆ
ಅರಳಿದ ಮನಸ್ಸು
ಹಾರಲು ಕಲಿಯುವುದು,
ಮನ್ವಂತರದ
ಮನುಕುಲಕ್ಕೆ ಜೀವಂತ ಬೆಳಕಾಗುವುದು.
No comments:
Post a Comment