ಕಾಲ್ನಡಿಗೆಯ ಸಣ್ಣ ಊರಿನಿಂದ ಹೆಜ್ಜೆಗಳು ನೂರಾದವು,
ರಾಜ್ಯ, ದೇಶ, ವಿದೇಶದ ದೊಡ್ಡ ಹೆದ್ದಾರಿಯವರೆಗೆ ನಡೆದವು,
ಸಾಧನೆ, ಶ್ರಮ, ನಂಬಿಕೆಯೇ ಉಸಿರಾಗಿಸಿಕೊಂಡ ಬಾಲಕ ,
ಭಾರತ ದೇಶಕ್ಕೆ ಹೊಸ ದಿಕ್ಕುದೆಸೆ ತೋರಿದ ಮಹಾನಾಯಕ.
ಅನಂತ ಆಕಾಶದಷ್ಟು ದೊಡ್ಡ ಕನಸುಗಳು,
ಬಾಲ್ಯದಲ್ಲೇ
ದೇಶವ ಹೃದಯದಲ್ಲಿರಿಸಿದವರು,
ಜನರ ಕಷ್ಟ, ನೋವುಗಳಿಗೆ
ಸ್ಪಂದಿಸಿದವರು,
ಸರಳತೆ, ಶ್ರದ್ಧೆ, ಶಿಸ್ತುಗಳ ಮೈಗೂಡಿಸಿಕೊಂಡವರು,
ಗೆಳೆಯರ, ಗುರುಗಳ ಹೃದಯ ಗೆದ್ದವರು.
ಅನವರತ ಅವಿರತ ಶ್ರಮದ ಸಂಕೇತ,
ಸ್ವಚ್ಛ ಭಾರತ, ಡಿಜಿಟಲ್ ಭಾರತ,
ಪ್ರತೀ ಹೆಜ್ಜೆಯಲ್ಲಿ ಹೊಸ ಬೆಳಕು.
ರೈತರು, ಯುವಕರು, ಬಡವರಿಗೆ
ನಂಬಿಕೆಯ ಮಾತು ಕೊಟ್ಟವರು.
"ಸಬ್ಕಾ ಸಾಥ್, ಸಬ್ಕ ವಿಕಾಸ್
" ಒಬ್ಬೊಬ್ಬರ ಬದುಕಿಗೂ ಸ್ಪೂರ್ತಿ.
ದೇಶದ ಜನರ ಆಶಾಕಿರಣ, ಭರವಸೆ, ಅಸಹಾಯಕರ ಉಸಿರು,
ಇಂದು ನಾವು ಹೃದಯಪೂರ್ವಕವಾಗಿ
ಸಂತೋಷದಿಂದ ಹುಟ್ಟುಹಬ್ಬ
ಆಚರಿಸುತ್ತೇವೆ.
ಅವರಿಗೆ ಆಯಸ್ಸು, ಆರೋಗ್ಯ, ಶಕ್ತಿ, ಜ್ಞಾನ ದೊರಕಲಿ,
ಸನಾತನ ಧರ್ಮ ನಲಿಯಲಿ, ಭಾರತ ಇನ್ನಷ್ಟು ಬೆಳೆಯಲಿ.
ದೇಶದ ಪುತ್ರ ಮೋದಿಜಿಗೆ ಜನ್ಮದಿನದ ಶುಭಾಶಯಗಳು,
ನಮ್ಮ ಹೆಮ್ಮೆ, ನಮ್ಮ ನಾಯಕ, ನಮ್ಮ ಪ್ರೇರಣೆ.
(ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ)
No comments:
Post a Comment