ಅವನತಿಯ ಯೋಚನೆಗಳ ದೂರ ತಳ್ಳು,
ಸಂತೋಷದ,
ಧನಾತ್ಮಕತೆಯ ಚಿಂತನೆಯ ತಬ್ಬು.|
ಋಣಾತ್ಮಕತೆ,ಹೀಗೆಳೆಯುವವರ ಸಂಗ ತೊರೆ,
ನಿನ್ನ ಜೀವನದ ಶಿಲ್ಪಿ ನೀನೇ, ನಡೆ ಮುಂದೆ, ನಡೆ
ಮುಂದೆ.||
ಸಂತೋಷದಿಂದಿರುವವರ
ಬಳಿ ಎಲ್ಲವೂ ಇಲ್ಲ,
ಎಲ್ಲದರಲ್ಲಿಯೂ
ಅವರು ಸಂತೋಷವ ಕಾಣ್ವರು.|
ಬಿಡು
ನೋವಿನ, ಗತ ಕಾಲದ ಚಿಂತೆ
ಕಂತೆಗಳ,
ಇರುವುದೊಂದೇ
ಜೀವನ ಸಂತಸವ ಕಾಣು, ನಡೆ ಮುಂದೆ, ನಡೆ
ಮುಂದೆ.||
ಸಂತೋಷ
ಹುಡುಕುವವರು ಲೋಕದ ಎಲ್ಲೆಗಳಲಿ,
ಭ್ರಮೆಯೆಂದು
ತಿಳಿದಿಲ್ಲ ಅಲೆಮಾರಿಗಳವರು.|
ಎಲ್ಲೋ
ಹುಡುಕುವ ತವಕದಿ ಮರೆವರು,
ಹೃದಯದಲ್ಲೇ
ಅಡಗಿಹ ಆ ಮುತ್ತು ರತ್ನಗಳ,
ನಡೆ ಮುಂದೆ, ನಡೆ ಮುಂದೆ.||
No comments:
Post a Comment