Friday, July 18, 2025

ಶ್ಯಾಮನಿಲ್ಲದ ಗೋಕುಲ!

 

ಅಕೋ ನೋಡೇ ಸಖಿ

ಶ್ಯಾಮ ಬಹನು।

ವಿರಹ ತುಂಬಿದ ಮನಕೆ

ಸಂತಸ ತಂದನು।।

 

ಮೂರು ದಿನಗಳಾಯ್ತು ಕೇಳಿ

ಶ್ಯಾಮನ ಕೊಳಲ ಆ ದನಿಯ।

ಅವನ ಮುಖವ ಕಾಣದೆ

ಕಂಬನಿ ಸುರಿಸಿದೆ ಈ ಹೃದಯ||

 

ಏಕೋ?,  ಏನೋ?,

ಎಲ್ಲಿ ಹೋದನೋ ಶ್ಯಾಮನ ನೆನೆದೆ

ಆತಂಕ ಮೈ ಮನದಲ್ಲಿ

ಮನೆಮಾಡಿ ಶಾಂತಿಯ ಕದಡಿದೆ ।।

 

ಶ್ಯಾಮನಿಲ್ಲದ ಗೋಕುಲ,

ಏತಕೆ ಹೇಳೇ ಸಖಿ?|

ಮನವೆಲ್ಲಾ ಕತ್ತಲೆ, 

ಬಾಳು ಬೇಕೇ ಸಖಿ?||

No comments:

Post a Comment

ಕೃಷ್ಣಾ ನೀನಿಲ್ಲದ ನಾನು!

ಕೃಷ್ಣಾ ನೀನಿಲ್ಲದ ನಾನು, ಜೀವವಿರದ ಶವದಂತೆ, ಬರೀ ಶೂನ್ಯದಂತೆ।।        ಕೃಷ್ಣಾ ನೀನಿಲ್ಲದ ನಾನು ,      ಸಿಹಿಯಿರದ   ಹಣ್ಣಿನಂತೆ,      ಸಮರಸವ...